ಕಡಬ : ಮನೆಯಂಗಳದಲ್ಲೇ ಭತ್ತ ಬೆಳೆದ ಅವಳಿ ಸಹೋದರರು

(ನ್ಯೂಸ್ ಕಡಬ) newskadaba.com ಸವಣೂರು, ಸೆ. 26:  ಅಕ್ಕಿ ಹೇಗೆ ಬರುತ್ತೆ. ಭತ್ತ ಹೇಗೆ ಬೆಳೆಯೋದು ಎಂದು ಕೇಳಿದ ಪುಟ್ಟ ತಂಗಿಯ ಪ್ರಶ್ನೆಗೆ ಅವಳಿ ಸಹೋದರರಿಬ್ಬರು ಪ್ರಾಯೋಗಿಕವಾಗಿ ಭತ್ತ ಬೆಳೆಸುವ ಮೂಲಕ ತಂಗಿಯ ಪ್ರಶ್ನೆ ಗೆ ಉತ್ತರಿಸಿ ಸೈ ಎನಿಸಿಕೊಂಡಿದ್ದಾರೆ.

ತಿನ್ನುವ ಅಕ್ಕಿ ಎಲ್ಲಿ ಸಿಗುತ್ತೆ, ಹೇಗೆ ಸಿಗುತ್ತೆ ಎನ್ನುವ ಪ್ರಶ್ನೆಗೆ ತಂಗಿಯ ಪ್ರಶ್ನೆ ವಿದ್ಯಾರ್ಥಿಗಳಾಗಿರುವ ಭವನ್ ಹಾಗೂ ಭುವನ್ ಗೆ ಭತ್ತದ ಕೃಷಿಯ ಮಹತ್ವವನ್ನು ತಿಳಿಸಿತ್ತು. ಈ ಕಾರಣಕ್ಕಾಗಿ ಮನೆಯ ಅಂಗಳದಲ್ಲೇ ಭತ್ತವನ್ನು ಬಿತ್ತಿ ಭತ್ತದ ಕೃಷಿಗೆ ಮುಂದಾದ ಈ ವಿದ್ಯಾರ್ಥಿಗಳು ಭತ್ತದ ಕೃಷಿಯನ್ನು ಮಹತ್ವವನ್ನು ತಿಳಿಸಲು ಮುಂದಾಗಿದ್ದಾರೆ.

 

ಇದು ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಸಮೀಪದ ಬೆಳಂದೂರು ಗ್ರಾಮದ ಅಮೈ ಎಂಬಲ್ಲಿ. ಇಲ್ಲಿನ ಭುವನ್ ಮತ್ತು ಭವನ್ ಎನ್ನುವ ಅವಳಿ ಸಹೋದರರು ಮನೆಯಂಗಳದಲ್ಲೇ ಭತ್ತ ಬೆಳೆದು ಮಾದರಿಯಾಗಿದ್ದಾರೆ.ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ತೃತೀಯ ವರ್ಷದ ಬಿಎಸ್ಸಿ ವಿದ್ಯಾಭ್ಯಾಸವನ್ನು ಮಾಡಿಕೊಂಡಿರುವ ಈ ಅವಳಿ ಸಹೋದರರು ಕೋವಿಡ್-19 ಕಾರಣದಿಂದ ಮನೆಯಲ್ಲೇ ಉಳಿದುಕೊಂಡಿದ್ದರು.

ಇದೇ ಸಮಯವನ್ನು ಸದುಪಯೋಗಪಡಿಸಿಕೊಂಡ ಈ ವಿಧ್ಯಾರ್ಥಿಗಳು ಮನೆಯ ಮುಂದಿನ ಅಂಗಳದಲ್ಲಿ ಭತ್ತ ಬೆಳೆಯುವ ಯೋಜನೆಯನ್ನು ಹಾಕಿ ಇದೀಗ ಅದರಲ್ಲಿ ಯಶಸ್ವಿಯನ್ನೂ ಪಡೆದುಕೊಂಡಿದ್ದಾರೆ.ಈಗಾಗಲೇ ಕೊಯಿಲಿಗೆ ಸಿದ್ಧಗೊಂಡಿದ್ದು, ಮನೆಯ ಖರ್ಚು ಹಾಗೂ ಧಾರ್ಮಿಕ ವಿಧಿ ವಿಧಾನಗಳಿಗೆ ಬೇಕಾದ ಭತ್ತದ ಕೃಷಿಯನ್ನು ಮಾಡಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ಅಂಗಳದಲ್ಲೇ ಭತ್ತ ಬೆಳೆಯುವುದನ್ನು ಆರಂಭಿಸಿದ್ದ ಈ ವಿದ್ಯಾರ್ಥಿಗಳು ಈ ಬಾರಿ ಕೊನೆಯ ಪರೀಕ್ಷೆಯನ್ನು ಎದುರಿಸುತ್ತಿರುವ ಕಾರಣಕ್ಕಾಗಿ ಕಡಿಮೆ ಸ್ಥಳದಲ್ಲಿ ಭತ್ತದ ನಾಟಿ ಮಾಡಿದ್ದಾರೆ.

error: Content is protected !!

Join the Group

Join WhatsApp Group