ಸುಳ್ಯ : ಬಾಡಿಗೆ ಪಾವತಿಸದ ಅಂಗಡಿಗೆ ಬೀಗ ಜಡಿದ ನ.ಪಂ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಸುಳ್ಯ , ಸೆ. 25:  ನಗರ ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿ ಅಂಗಡಿ ನಡೆಸುತ್ತಿದ್ದು ನ.ಪಂ ಗೆ ಕಳೆದ ಒಂದೂವರೆ ವರುಷದಿಂದ ಬಾಡಿಗೆ ಪಾವತಿಸದ ಅಂಗಡಿಗಳನ್ನು ನ.ಪಂ ಅಧಿಕಾರಿಗಳು ಇಂದು ಮುಚ್ಚಿದರು.

 

ನಗರ ಪಂಚಾಯತ್ ಕಚೇರಿಯ ಎದುರು ರಸ್ತೆಯ ಇನ್ನೊಂದು ಬದಿಯಲ್ಲಿರುವ ನ.ಪಂ ವಾಣಿಜ್ಯ ಸಂಕೀರ್ಣದಲ್ಲಿರುವ ಎರಡು ಅಂಗಡಿಗಳಿಗೆ ಬಾಡಿಗೆ ಪಾವತಿಸಿಲ್ಲ ಎಂಬ ಕಾರಣಕ್ಕೆ ಇಂದು ಸ್ಥಳಕ್ಕೆ ದೌಡಯಿಸಿದ ಅಧಿಕಾರಿಗಳು ಬೀಗ ಜಡಿದಿದ್ದಾರೆ.  ಹಲವು ಬಾರಿ ನೋಟಿಸ್ ನೀಡಿದ್ದರು ವಾಣಿಜ್ಯ ಸಂಕೀರ್ಣ ಅಂಗಡಿಯನ್ನು ಬಾಡಿಗೆ ಪಡೆದು, ಒಂದೂವರೆ ವರ್ಷದಿಂದ ಬಾಡಿಗೆ ನೀಡಿಲ್ಲ. ಎಂದಿದ್ದಾರೆ.ಕೊನೆಯ ನೋಟಿಸ್ ಆಗಿ ಏಳು ದಿನದ ಹಿಂದೆಯೂ ನೀಡಿದ್ದರು ಬಾಡಿಗೆ ಪಾವತಿಸದೇ ಇದ್ದದಕ್ಕೆ ಈ ಕ್ರಮ ಜರುಗಿಸಲಾಗಿದೆ ಎಂದು ನ.ಪಂ ಮುಖ್ಯಾಧಿಕಾರಿ ಮತ್ತಡಿ ತಿಳಿಸಿದರು.

Also Read  ಹಂಪಿ ಪಾರಂಪರಿಕ ಸ್ಮಾರಕದಲ್ಲಿ ಫೋಟೋಗ್ರಫಿಗೆ ನಿಷೇಧ: ಪ್ರವಾಸಿಗರಿಂದ ಆಕ್ರೋಶ

 

error: Content is protected !!
Scroll to Top