ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿಗೆ ಶ್ರಾವ್ಯ ಆರ್.ಅಂಚನ್ ಆಯ್ಕೆ

(ನ್ಯೂಸ್ ಕಡಬ) newskadaba.com ಪಡುಬಿದ್ರಿ, ಸೆ. 25:  ಶೈಕ್ಷಣಿಕ, ಕ್ರೀಡಾ ಮತ್ತು ಸಾಂಸ್ಕೃ ತಿಕ ರಂಗಗಳ ಸಾಧನೆಗಳನ್ನು ಪರಿಗಣಿಸಿ ದಾವಣಗೆರೆ-ಸಾಲಿಗ್ರಾಮ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನವು ನೀಡಲ್ಪಡುವ ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿಗೆ ಪಡುಬಿದ್ರಿಯ ಶ್ರಾವ್ಯ ಆರ್.ಅಂಚನ್ ಆಯ್ಕೆಯಾಗಿದ್ದಾರೆ.

ಇಲ್ಲಿನ ಸಾಗರ್ ವಿದ್ಯಾ ಮಂದಿರ ಶಾಲಾ ವಿದ್ಯಾರ್ಥಿನಿಯಾಗಿದ್ದ ಈಕೆ ಈ ಬಾರಿಯ SSLC ತರಗತಿ ಪರೀಕ್ಷೆಯಲ್ಲಿ 613(ಶೆ.98.08) ಅಂಕ ಗಳಿಸಿದ್ದು, ಶೈಕ್ಷಣಿಕ ಸಾಧನೆಯೊಂದಿಗೆ ಕ್ರೀಡಾ ಚಟುವಟಿಕೆಯಲ್ಲೂ ಅದ್ಭುತ ಸಾಧಕರು. ಕಬಡ್ಡಿ ಕ್ರೀಡೆಯಲ್ಲಿ ಪಡುಬಿದ್ರಿ ಸಾಗರ್ ವಿದ್ಯಾ ಮಂದಿರ ಶಾಲಾ ವಿದ್ಯಾರ್ಥಿನಿಯಾಗಿ ಸತತ ಎರಡು ಬಾರಿ ರಾಜ್ಯ ಮಟ್ಟಕ್ಕೆ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದವರು. ಶಾಲಾ ಮಟ್ಟದ ಪ್ರತಿಭಾನ್ವಿತ ನೃತ್ಯಪಟುವೂ ಆಗಿದ್ದಾರೆ. ಇವರು, ಪಡುಬಿದ್ರಿಯ ರವಿರಾಜ್ ಕೋಟ್ಯಾನ್-ಶ್ಯಾಮಲಾ ದಂಪತಿಯ ಪುತ್ರಿಯಾಗಿದ್ದಾರೆ .ಶ್ರಾವ್ಯಳಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವದಂದು ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

Also Read  ಕಾಲೇಜಿನಲ್ಲಿ ಕುಸಿದುಬಿದ್ದು ತೀವ್ರ ಅಸ್ವಸ್ಥ- ಉಪನ್ಯಾಸಕಿ ಮೃತ್ಯು

 

 

error: Content is protected !!
Scroll to Top