ತ್ರಿವಳಿ ಜಿಲ್ಲೆಗಳ ಸಂಯುಕ್ತ ಖಾಝಿ ಬೇಕಲ್ ಉಸ್ತಾದ್ ನಿಧನ ➤ ಪಿಎಫ್ಐ ಉಪ್ಪಿನಂಗಡಿ ವತಿಯಿಂದ ಸಂತಾಪ ಸೂಚನೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 24. ಹಿರಿಯ ವಿದ್ವಾಂಸ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಯ ಸಂಯುಕ್ತ ಖಾಝಿ, ಸುನ್ನಿ ಜಂಇಯ್ಯತುಲ್ ಉಲಮಾ ಇದರ ರಾಜ್ಯಾಧ್ಯಕ್ಷರಾಗಿದ್ದ ಅಲ್ಹಾಜ್ ಬೇಕಲ ಪಿ.ಎಂ ಇಬ್ರಾಹಿಂ ಮುಸ್ಲಿಯಾರ್ ಇಂದು ಬೆಳಿಗ್ಗೆ ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ಪಾತ್ರರಾಗಿದ್ದಾರೆ ಎನ್ನುವ ಸುದ್ದಿ ಕೇಳಿ ತೀವ್ರ ಆಘಾತವಾಗಿದ್ದು, ಇಂದು ಸಮುದಾಯದ ಪರಿಪೂರ್ಣ ನಾಯಕತ್ವರೊಬ್ಬರನ್ನು ಕಳಕೊಂಡ ಅತೀವ ದುಃಖದಲ್ಲಿದೆ. ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಜಿಲ್ಲಾ ಸಮಿತಿಯು ತೀವ್ರ ಸಂತಾಪವನ್ನು ಸೂಚಿಸಿದೆ.

ದೇವ್‌ ಬಂದ್ ಅರಬಿಕ್ ಕಾಲೇಜಿನಲ್ಲಿ ಪದವಿ ಪಡೆದು, ಬಂಟ್ವಾಳ ಮತ್ತು ಸೂರಿಂಜೆ ಮಸೀದಿಯಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿ, ತದನಂತರ ಬೇಕಲದಲ್ಲಿ ಸುದೀರ್ಘ 43 ವರ್ಷಗಳ ಕಾಲ ಸೇವೆ ಸಲ್ಲಿಸಿ ‘ಬೇಕಲ ಉಸ್ತಾದ’ರೆಂದೇ ನಾಮಾಂಕಿತಗೊಂಡಿದ್ದರು.

Also Read  ಬಡಗನ್ನೂರಿನ ಅಪಘಾತದ ಗಾಯಾಳು ವಿಧಿವಶ ► ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಹನುಮಂತಪ್ಪ ಮೃತ್ಯು

ಕರ್ಮಶಾಸ್ತ್ರ ಮತ್ತು ಖಗೋಳ ಶಾಸ್ತ್ರಗಳಲ್ಲಿ ಪಾಂಡಿತ್ಯ ಹೊಂದಿರುವ ಬೇಕಲ ಉಸ್ತಾದರು ತಾಜುಲ್ ಫುಖಹಾಅ್ ಎಂಬ ಬಿರುದನ್ನೂ ಕೂಡಾ ಪಡೆದಿದ್ದರು. ಉಸ್ತಾದರು ಮಾಡಿದ ಸತ್ಕರ್ಮಗಳನ್ನು ಅಲ್ಲಾಹನು ಸ್ವೀಕರಿಸಲಿ, ದುಃಖವನ್ನು ಸಹಿಸುವ ಶಕ್ತಿ ಕುಟುಂಬ ವರ್ಗ ಮತ್ತು ಸಾವಿರಾರು ಶಿಷ್ಯಂದಿರುಗಳಿಗೆ ಹಾಗೂ ಸಮುದಾಯಕ್ಕೆ ನೀಡಲಿ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಜಿಲ್ಲಾ ಸಮಿತಿಯು ಸಂತಾಪ ವ್ಯಕ್ತಪಡಿಸಿದೆ.

error: Content is protected !!
Scroll to Top