ಬೆಳ್ಳಾರೆ: ಸಂಬಂಧಿ ಯುವಕನಿಂದ ಯುವತಿಯ ಮೇಲೆ ಅತ್ಯಾಚಾರ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಸೆ. 24. ಕೊಡಿಯಾಲದಲ್ಲಿ ಯುವತಿಯ ಮೇಲೆ ಯುವಕನೋರ್ವ ಅತ್ಯಾಚಾರವೆಸಗಿ, ಆಕೆಯು ಗರ್ಭವತಿಯಾಗಿದ್ದು ಈ ಬಗ್ಗೆ ಯುವಕನ ಮೇಲೆ ಪ್ರಕರಣ ದಾಖಲಿಸಲಾಗಿದೆ.

 


ಮುರುಳ್ಯದ ಸಮಾದಿ ಕಾಲನಿ ನಿವಾಸಿ ಯುವತಿಯು ಕೊಡಿಯಾಲದಲ್ಲಿರುವ ತನ್ನ ಅಜ್ಜಿಮನೆಗೆಂದು ಹೋಗಿದ್ದ ಸಂದರ್ಭ ದೂರದ ಸಂಬಂಧಿ ಮರ್ಕಂಜದ ಯುವಕ ಹರೀಶ ಎಂಬಾತ ದೈಹಿಕ ಸಂಪರ್ಕ ಬೆಳೆಸಿದ್ದು, ಯುವತಿಯು 9 ತಿಂಗಳ ಗರ್ಭಿಣಿಯಾಗಿದ್ದಾಳೆ. ಈ ಕುರಿತು ಯುವತಿಯ ಮನೆಯವರು ಬೆಳ್ಳಾರೆ ಠಾಣೆಯಲ್ಲಿ ದಾಖಲಿಸಿದ ದೂರಿನನ್ವಯ ಪೊಲೀಸರು ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದಾಗಿ ತಿಳಿದು ಬಂದಿದೆ.

Also Read  ಮೇ.30: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಂದ ದೂರು ಸ್ವೀಕಾರ

error: Content is protected !!
Scroll to Top