ಅಜ್ಜಾವರ: ಯಶಸ್ವಿಯಾಗಿ ನಡೆದ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 24. ಎಸ್ಕೆಎಸ್ಎಸ್ಎಫ್ ವಿಖಾಯ ರಕ್ತದಾನಿ ಬಳಗ ದ.ಕ. ಜಿಲ್ಲೆ ಇದರ ನಿರ್ದೇಶನ ಪ್ರಕಾರ ಎಸ್.ಕೆ.ಎಸ್.ಎಸ್.ಎಫ್ ಅಜ್ಜಾವರ ಕ್ಲಸ್ಟರ್ ಹಾಗೂ ಅಜ್ಜಾವರ ಕ್ಲಸ್ಟರ್ ವಿಖಾಯ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಸಹಭಾಗಿತ್ವದಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ ಸೆ. 24 ರಂದು ಅಜ್ವಾವರ ನೂರುಲ್ ಹುದಾ ಮದರಸ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಅಜ್ವಾವರ ಎಂ.ಜೆ.ಎಮ್. ಖತೀಬರಾದ ಬಹು ಜಾಫರ್ ಸಾದಿಕ್ ದಾರಿಮಿ ಉದ್ಘಾಟಿಸಿದರು. ಅಜ್ಜಾವರ ಎಸ್.ಕೆ.ಎಸ್.ಎಸ್.ಎಫ್ ಕ್ಲಸ್ಟರ್ ಅಧ್ಯಕ್ಷರಾದ ಬಹು ಶಾಫಿ ಮುಕ್ರಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ದ.ಕ. ಜಿಲ್ಲಾ ಎಸ್ಕೆ.ಎಸ್.ಎಸ್.ಎಫ್ ವಿಖಾಯ ಚೇರ್ಮನ್ ಬಹು ಸಯ್ಯದ್ ಇಸ್ಮಾಯಿಲ್ ತಂಙಳ್ ದುವಾ ನೆರವೇರಿಸಿದರು. ಸಭಾ ಕಾರ್ಯಕ್ರಮದಲ್ಲಿ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಪ್ರೊಫೆಸರ್ ಡಾ. ಅವಿನಾಶ್, ರಕ್ತದಾನಿ ಪ್ರಶಸ್ತಿ ಪುರಸ್ಕೃತ ಪಿ.ಬಿ. ಸುಧಾಕರ ರೈ ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಅಜ್ಜಾವರ ಎಮ್.ಜೆ.ಎಮ್. ಅಧ್ಯಕ್ಷರಾದ ಅಬ್ದುಲ್ಲಾ ಕುಂಞ ಪಳ್ಳಿಕೆರೆ, ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಅಧ್ಯಕ್ಷರಾದ ಜಮಾಲ್ ಬೆಳ್ಳಾರೆ, ದ.ಕ. ಜಿಲ್ಲಾ ಎಸ್ ಕೆ ಎಸ್ ಎಸ್ ಎಫ್ ವಿಖಾಯ ರಕ್ತದಾನಿ ಬಳಗ ಉಸ್ತುವಾರಿ ತಾಜುದ್ದೀನ್ ಟರ್ಲಿ, ಸುಳ್ಯ ವಲಯ ರಕ್ತದಾನಿ ಬಳಗದ ಉಸ್ತುವಾರಿ ಶರೀಫ್ ಅಜ್ಜಾವರ, ಸುಳ್ಯ ವಲಯ ವಿಖಾಯ ಜನರಲ್ ಕನ್ವೀನರ್ ಕಲಂದರ್ ಎಲಿಮಲೆ, ರಫೀಕ್ ಮುಸ್ಲಿಯಾರ್ ಮುಂತಾದವರು ಭಾಗವಹಿಸಿದ್ದರು.

Also Read  ಕಡಬ: ನೇಣುಬಿಗಿದು ಮಹಿಳೆ ಆತ್ಮಹತ್ಯೆ

error: Content is protected !!