ಹಿರಿಯ ನಟ ರಾಕ್​ಲೈನ್ ಸುಧಾಕರ್ ನಿಧನ..!!

(ನ್ಯೂಸ್ ಕಡಬ) newskadaba.com ಬೆಂಗಳೂರು,ಸೆ. 24:  ತಮ್ಮ ವಿಶಿಷ್ಟ ಕಾಮಿಡಿ ನಟನೆಯ ಮೂಲಕ ಸ್ಯಾಂಡಲ್ ವುಟ್ ಚಿತ್ರರಂಗದಲ್ಲಿ ನಟರಾಗಿ ಗುರ್ತಿಸಿಕೊಂಡಿದ್ದಂತ ನಟ ರಾಕ್ ಲೈನ್ ಸುಧಾಕರ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

 

ಶೂಟಿಂಗ್​ ಸಮಯದಲ್ಲೇ ಹೃದಯಾಘತ ಸಂಭವಿಸಿದ್ದರಿಂದ ಹಿರಿಯ ನಟ ರಾಕ್​ಲೈನ್​ ಸುಧಾಕರ್​ ಮೃತಪಟ್ಟಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಪೋಷಕ ಪಾತ್ರ ಹಾಗೂ ಕಾಮಿಡಿ ಪಾತ್ರಗಳಲ್ಲಿ ಅವರು ನಟಿಸಿದ್ದರು. ಅವರ ಅಗಲಿಕೆ ಇಡೀ ಚಿತ್ರರಂಗವೇ ಶೋಕ ವ್ಯಕ್ತಪಡಿಸಿದೆ. ಕೆಲ ದಿನಗಳ ಹಿಂದಷ್ಟೇ ಸುಧಾಕರ್​ಗೆ ಕೊರೋನಾ ಸೋಂಕು ತಗುಲಿತ್ತು. ಇದಕ್ಕಾಗಿ ಅವರು ಚಿಕಿತ್ಸೆ ಪಡೆದು ಬಂದಿದ್ದರು. ಅವರು ಸಂಪೂರ್ಣ ಗುಣಮುಖರಾದ ಹಿನ್ನೆಲೆಯಲ್ಲಿ ಮತ್ತೆ ಶೂಟಿಂಗ್​ ಕೆಲಸಗಳಲ್ಲಿ ಪಾಲ್ಗೊಂಡಿದ್ದರು. ಸಿಂಪಲ್​ ಸುನಿ ನಿರ್ದೇಶನದ ಸಿನಿಮಾ ಶೂಟಿಂಗ್​ ವೇಳೆ ಅವರಿಗೆ ಹೃದಯಾಘತ ಸಂಭವಿಸಿದೆ.

Also Read  ಮನೆಯಲ್ಲಿನ ವ್ಯವಸ್ಥೆಯನ್ನು ಸರಿ ಮಾಡಲಾಗದವನು ಸಮಾಜದ ನಾಯಕನಾಗಲು ಅನರ್ಹ►► ಪ್ರವೀಣ್ ಕುಮಾರ್ ಕೆಡೆಂಜಿ

 

error: Content is protected !!
Scroll to Top