ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದ ನೆಲ್ಯಾಡಿ ➤ ಪತ್ನಿ, ಚಿಕ್ಕಮ್ಮ ಮೇಲೆ ಆಸಿಡ್ ದಾಳಿ,ಆರೋಪಿ ಪರಾರಿ..!!

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ. 24: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಆಕೆಯ ಚಿಕ್ಕಮ್ಮನ ಮೇಲೆ ಆಸಿಡ್ ಎರಚಿದ ಘಟನೆ ಕಡಬ ತಾಲೂಕಿನ ನೆಲ್ಯಾಡಿಯ ಕೊಣಾಲು ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ. ಸ್ಥಳೀಯ ನಿವಾಸಿ 38 ವರುಷ ಪ್ರಾಯದ ಬಿಜು ಎಂಬಾತ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.

ನೆಲ್ಯಾಡಿ ನಿವಾಸಿ ಬಿಜು ತನ್ನ ಪತ್ನಿ ಶೈನಿ ಹಾಗೂ ಪತ್ನಿಯ ಚಿಕ್ಕಮ್ಮ ಝಾನ್ಸಿ ಮೇಲೆ ಆಸಿಡ್ ದಾಳಿ ನಡೆಸಿದ ಪರಿಣಾಮ ಇಬ್ಬರ ಮುಖ. ಕಣ್ಣಿನ ಭಾಗ ಸುಟ್ಟು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.  ಇನ್ನು, ಪತಿ ಪತ್ನಿ ನಡುವೆ ವೈಮನಸ್ಸು ಇದ್ದುದರಿಂದ ಇಬ್ಬರು ಬೇರೆ ಬೇರೆಯಾಗಿ ವಾಸಿಸುತ್ತಿದ್ದರು, ಎಂದಿನಂತೆ ಇಂದು ಬೆಳಿಗೆ 6 ಗಂಟೆ ವೇಳೆ ಗೆ ಶೈನಿ ಹಾಗೂ ಅವರ ಚಿಕ್ಕಮ್ಮ ಝಾನ್ಸಿ ರವರು ಮನೆಯಿಂದ ಕೆಲಸಕ್ಕೆ ಹೋಗಲೆಂದು ಕಾಲುದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ, ಕಾದು ಕುಳಿತಿದ್ದಆರೋಪಿ ಬಿಜು ಇಬ್ಬರ ಮೇಲು ಆಸಿಡ್ ಎರಚಿ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.  ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರನ ದಾಖಲಿಸಿಕೊಂಡಿದ್ದಾರೆ.

Also Read  ಈರುಳ್ಳಿ ಬೆಲೆ ಏರಿಕೆ, ಕಡಿಮೆ ಆಯ್ತು ಬಳಕೆ ➤ ಖರೀದಿಗೆ ಗ್ರಾಹಕರು ಹಿಂದೇಟು!

 

error: Content is protected !!
Scroll to Top