(ನ್ಯೂಸ್ ಕಡಬ) newskadaba.com ಹರಿಯಾಣ, ಸೆ. 24: ಭಾರತೀಯ ವಾಯು ಪಡೆಯ ಅತ್ಯಂತ ಪ್ರಬಲ ರಫೇಲ್ ಫೈಟರ್ ಜಟ್‍ನ ಪ್ರಥಮ ಮಹಿಳಾ ಪೈಲಟ್ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಈ ಉತ್ತರ ಲಭಿಸಿದೆ. ವಾರಣಾಸಿ ಮೂಲದ ಐಎಎಫ್‍ನ ಸಮರ್ಥ ಮಹಿಳಾ ಪೈಲಟ್ ಪ್ಲೈಟ್ ಲೆಫ್ಟಿನೆಂಟ್ ಶಿವಾಂಗಿ ಸಿಂಗ್ ಈ ಯುದ್ಧ ವಿಮಾನವನ್ನು ಹಾರಿಸುವ ದೇಶದ ಪ್ರಥಮ ವನಿತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2017ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾದ ಶಿವಾಂಗಿ ಸಿಂಗ್ ಯುದ್ಧ ವಿಮಾನಗಳ ಹಾರಾಟ ಮತ್ತು ಸಮರ ಕೌಶಲ್ಯದಲ್ಲಿ ವಿಶೇಷ ಪರಿಣಿತಿ ಪಡೆದಿದ್ದಾರೆ. ಅಲ್ಲದೆ, ಭಾರತದ ಹೆಮ್ಮೆಯ ವೀರಾಗ್ರಣಿ ಅಭಿನಂದನ್ ವರ್ಧಮಾನ್ ಅವರೊಂದಿಗೆ ಕೆಲವು ಯುದ್ಧ ವಿಮಾನಗಳನ್ನು ಹಾರಿಸಿರುವ ಅನುಭವ ಹೊಂದಿದ್ದಾರೆ. ಅಪಾರ ದೇಶಪ್ರೇಮಿ ಮತ್ತು ಅತ್ಯಂತ ಚಾಣಕ್ಷರಾಗಿರುವ ಪ್ಲೈಟ್ ಲೆಫ್ಟಿನೆಂಟ್ ಶಿವಾಂಗಿ ಸಿಂಗ್ ಅವರನ್ನು ರಫೇಲ್ ಪೈಟರ್ ಜಟ್ ಹಾರಾಟಕ್ಕೆ ಆಯ್ಕೆ ಮಾಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.