ಕುಕ್ಕೆಯಲ್ಲಿ ದಿನಕ್ಕೆ 225 ಆಶ್ಲೇಷ ಪೂಜೆ ಮಾಡಲು ಅವಕಾಶ ➤ ಆಡಳಿತಾಧಿಕಾರಿ ರೂಪಾ ಎಂ.ಜೆ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ. 24:  ಕುಕ್ಕೆ ಸುಬ್ರಹ್ಮಣ್ಯದಲ್ಲಿ ದಿನಕ್ಕೆ 225 ಶ್ಲೇಷ ಪೂಜೆ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ರೂಪಾ ಎಂ ಜೆ ರವರು ತಿಳಿಸಿದ್ದಾರೆ.

 

ಕುಕ್ಕೆ ಯಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಣೆ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.  ಪೂಜೆಗಳ ಬಗ್ಗೆ ಮಾಹಿತಿ ನೀಡಿದ್ದು, ಆಶ್ಲೇಷ ಬಲಿ ಪೂಜೆ ಮೂರು ಬ್ಯಾಚ್ ಮಾಡಿ ತಲಾ 75ರಂತೆ ದಿನಕ್ಕೆ 225 ಆಶ್ಲೇಷ ಪೂಜೆ ನಡೆಸಲು ಅವಕಾಶ ಕಲ್ಪಿಸಿದ್ದು, ಬೆಳಗ್ಗೆ ಎರಡು ಬ್ಯಾಚ್, ಸಂಜೆ ಒಂದು ಬ್ಯಾಚ್ ಆಶ್ಲೇಷ ಪೂಜೆ ನಡೆಸಲಾಗುವುದು ಎಂದರು. ಆನ್ಲೈನ್ ಮುಖಾಂತರ ಆಶ್ಲೇಷ ಪೂಜೆ ಬುಕ್ಕಿಂಗ್ ಮಾಡಲು ಅವಕಾಶ ನೀಡುವ ಬಗ್ಗೆ ಆಲೋಚಿಸಲಾಗಿದೆ, ಸರ್ಪ ಸಂಸ್ಕಾರ ಈಗಾಗಲೇ 3107 ಬುಕ್ಕಿಂಗ್ ಮಾಡಿದ್ದು ಇದ್ದು ಮುಂದಿನ ದಿನಗಳಲ್ಲಿ ಬುಕ್ಕಿಂಗ್ ಮಾಡಿದವರನ್ನು ಒಂದಿಷ್ಟು, ನೇರ ಬಂದು ಸರ್ಪ ಸಂಸ್ಕಾರ ಮಾಡಿಸುವವರಿಗೂ ಅವಕಾಶ ಮಾಡಿ ಕೊಡಲಾಗುವುದು ಎಂದರು.

Also Read  ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ➤ ಸವಾರ ಮೃತ್ಯು

error: Content is protected !!
Scroll to Top