ಮಂಗಳೂರು: ‘ಮುಲ್ಕಿ ಸುಂದರರಾಮ ಶೆಟ್ಟಿ’ ಎಂದು ಮರುನಾಮಕರಣ ಪಡೆದ ‘ಲೈಟ್ ಹೌಸ್ ಹಿಲ್’ ರಸ್ತೆ*

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 23. ಬಾವುಟಗುಡ್ಡೆ ರಸ್ತೆಯೆಂದು ಸ್ಥಳೀಯರಿಂದ ಕರೆಯಲ್ಪಡುವ ಲೈಟ್ ಹೌಸ್ ಹಿಲ್ ರಸ್ತೆಯನ್ನು ಅಧಿಕೃತವಾಗಿ ವಿಜಯ ಬ್ಯಾಂಕ್‌ನ ಮಾರ್ಗದರ್ಶಕರು, ಜಿಲ್ಲೆಯ ಸಾವಿರಾರು ಯುವಕರಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಅವರ ಹೆಸರಿನಲ್ಲಿ ‘ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ ಮಾಡಲಾಯಿತು.

 


ಈ ರಸ್ತೆಯನ್ನು ಮರುನಾಮಕರಣದ ಪ್ರಸ್ತಾಪವನ್ನು ನಗರ ಪಾಲಿಕೆ ಅಂಗೀಕರಿಸಿದ್ದು, ಆಕ್ಷೇಪಗಳು ಕೇಳಿಬಂದ ಹಿನ್ನೆಲೆ, ಹೈಕೋರ್ಟ್ ಮೇ 24, 2017 ರಂದು ತಡೆಯಾಜ್ಞೆ ನೀಡಿತ್ತು. ಪರ ವಿರೋಧಗಳ ವಾದಗಳು ಮತ್ತು ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ತನ್ನ ಹಿಂದಿನ ನಿರ್ಧಾರವನ್ನು ಪರಿಶೀಲಿಸಲು ಮತ್ತು ಈ ವಿಷಯದಲ್ಲಿ ಸೂಕ್ತ ನಿಲುವನ್ನು ತೆಗೆದುಕೊಳ್ಳಲು ಆದೇಶ ನೀಡಿತ್ತು. ಇದನ್ನು ಪರಿಶೀಲಿಸಿದ ಆಯುಕ್ತರು ರಸ್ತೆಗೆ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಹೆಸರಿಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ತಡೆಯಾಜ್ಞೆಯನ್ನು ಹಿಂಪಡೆದ ಸರ್ಕಾರವು ಈ ರಸ್ತೆಗೆ ‘ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ ಮಾಡಲು ಅನುಮತಿ ನೀಡಿತ್ತು.

Also Read  ಪಚ್ಚನಾಡಿ ತ್ಯಾಜ್ಯ ನೀರು ಸಂಸ್ಕರಣೆಗೆ ಶಾಶ್ವತ ಪರಿಹಾರ - ಕೋಟಾ ಶ್ರೀನಿವಾಸ ಪೂಜಾರಿ

ಇಂದು ನಡೆದ ಬಾವುಟ ಗುಡ್ಡೆಯ ಸಿಂಡಿಕೇಟ್ ಬ್ಯಾಂಕಿನ ಸಮೀಪದಲ್ಲಿ ಮರುನಾಮಕರಣ ಸಮಾರಂಭದಲ್ಲಿ ಹಲವಾರು ಗಣ್ಯರು ಭಾಗವಹಿಸಿದ್ದರು. ನಗರದ ಮೇಯರ್ ದಿವಾಕರ್ ಪಾಂಡೇಶ್ವರ ಅವರು ಈ ರಸ್ತೆಯನ್ನು ಅಧಿಕೃತವಾಗಿ ಪ್ರಸಿದ್ಧ ಬ್ಯಾಂಕರ್ ಹೆಸರಿನಲ್ಲಿ ಮರುನಾಮಕರಣ ಮಾಡಿದ್ದಾರೆ.

error: Content is protected !!
Scroll to Top