ಕಾರ್ಕಳ : ಮಾರಿಗುಂಡಿ ದೇವಸ್ಥಾನದಿಂದ 16 ಸಾವಿರ ರೂ, ಡಿವಿಆರ್ ಕಳ್ಳತನ..!!

(ನ್ಯೂಸ್ ಕಡಬ) newskadaba.com ಕಾರ್ಕಳ, ಸೆ. 23:  ಕಾರ್ಕಳದ ಮುಂಡ್ಕೂರು ಗ್ರಾಮದ ಕಜೆ ಶ್ರೀ ಮಹಮ್ಮಾಹಿ ದೇವಸ್ಥಾನದ ಬಾಗಿಲಿನ ಬೀಗ ಮುರಿದು ಗೋಡ್ರೆಜ್ ನಲ್ಲಿದ್ದ 16 ಸಾವಿರ ರೂ. ಮತ್ತು ಸಿಸಿಟಿವಿಯ ಡಿವಿಆರ್ ಅನ್ನು ಸೆ. 21 ರಂದು ಖದೀಮರು ಕಳವುಗೈದಿದ್ದಾರೆ.

 

 

ಒಂದು ಗೋಡ್ರೆಜ್ ನಲ್ಲಿದ್ದ 11 ಸಾವಿರ ರೂ. ಹಾಗು ಮತ್ತೂಂದು ಗೋಡ್ರೆಜ್ ನಲ್ಲಿದ್ದ 5 ಸಾವಿರ ರೂ. ಸೇರಿದಂತೆ ಒಟ್ಟು 16 ಸಾವಿರ ಕಳವುಗೈದಿದ್ಧಾರೆ. ದೇವರ ಗರ್ಭಗುಡಿಯ ಬಾಗಿಲನ್ನು ತೆರೆದಿಟ್ಟಿದ್ದಾರೆ. ಇನ್ನು ಸಿಸಿಟಿವಿ ಡಿವಿಆರ್ ಹೊತ್ತುಕೊಂಡು ಹೋಗಿರುವ ಕಳ್ಳರು ಅತಿಥಿ ಗೃಹಗಳ ರೂಮಿನ ಬಾಗಿಲಿಗೆ ಹಾಕಿದ್ದ ಬೀಗಗಳನ್ನು ಮುರಿದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

Also Read  ಕದ್ರಿ ಪಾರ್ಕ್‍ನಲ್ಲಿ ಮಾವು ಮೇಳ

 

error: Content is protected !!
Scroll to Top