ಕಡಬ: ಇಸ್ಕಾನ್ ಅಕ್ಷಯ ಪಾತ್ರ ಕಾರ್ಯಕ್ರಮ ➤ ಬಡವರಿಗೆ ಅಹಾರದ ಕಿಟ್ ವಿತರಣೆ ಹಾಗೂ ಪ್ರತಿಭಾ ವಿದ್ಯಾರ್ಥಿಗಳಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಸೆ. 23. ಮಂಗಳೂರು ಇಸ್ಕಾನ್ ಅಕ್ಷಯ ಪಾತ್ರ ಇದರ ವತಿಯಿಂದ ಕಡಬ ವಿ.ಹಿಂ.ಪ ಬಜರಂಗದಳದ ಸಹಕಾರದೊಂದಿಗೆ ಆಹಾರ ಸಾಮಗ್ರಿ ವಿತರಣೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಇಸ್ಕಾನ್ ನ ಕಾರುಣ್ಯ ಸಾಗರದಾಸ ಸ್ವಾಮೀಜಿ ಹಾಗೂ ಸಭೆಯ ಅಧ್ಯಕ್ಷತೆಯನ್ನು ಕಡಬ ತಾಲೂಕು ಪಂಚಾಯತ್ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ನೂರಾರು ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಯ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಜಿಲ್ಲಾ ವಿಹಿಂಪ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ಕೃಷ್ಣ ಶೆಟ್ಟಿ ಕಡಬ, ವಶ್ವ ಹಿಂದು ಪರಿಷತ್ ಕಡಬ ಇದರ ಅಧ್ಯಕ್ಷರಾದ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ ಉಪಸ್ಥಿತರಿದ್ದರು.

Also Read  ಅಘೋಷಿತ ತುರ್ತುಪರಿಸ್ಥಿತಿಯ ಈ ಸನ್ನಿವೇಶದಲ್ಲಿ ಸಂವಿಧಾನದ ಮೌಲ್ಯಗಳನ್ನು ಕಾಪಾಡಲು ಕ್ಯಾಂಪಸ್ ಫ್ರಂಟ್ ರಾಷ್ಟ್ರವ್ಯಾಪಿ ಅಭಿಯಾನ

error: Content is protected !!
Scroll to Top