(ನ್ಯೂಸ್ ಕಡಬ) newskadaba.com ಉತಾಹ್ , ಸೆ. 23: ಮೂರ್ತಿ ಚಿಕ್ಕಾದಾದರೂ ಕೀರ್ತಿ ದೊಡ್ಡದು ಅನ್ನೋ ಮಾತಿದೆ. ಈ ಮಾತು ಇದೀಗಾ ಅಕ್ಷಃರಶ ನಿಜವಾಗಿದೆ. ಹೌದು ಈ ಪುಟ್ಟ ಕಂದನಿಗೆ ಈಗ ಕೇವಲ ಆರು ತಿಂಗಳು ಆದ್ರೆ ಈ ಪಾಪುವಿನ ಸಾಹಸ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟು ನೋಡುವಂತದ್ದು. ಹೌದು ಯುಎಸ್ ನ ಉತಾಹ್ ನಲ್ಲಿ ನೆಲೆಸಿರೋ ಈ ಆರು ತಿಂಗಳ ಮಗುವಿನ ಹೆಸರು ರಿಚ್ ಕೇಸಿ ಹಂಫೆರಿಸ್ ಎಂದು. ಈ ಮಗು ಕಳೆದವಾರಷ್ಟೇ ವಿಶ್ವ ದಾಖಲೆಯೊಂದನ್ನು ಮುರಿದಿದೆ.ನೀರಲ್ಲಿ ಆಟವಾಡುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ದೊಡ್ಡವರಾಗಲಿ ಚಿಕ್ಕವರಾಗಲಿ ಎಲ್ಲರಿಗೂ ನೀರಲ್ಲಿ ಆಡುವುದೆಂದರೆ ಎಲ್ಲಿಲ್ಲದ ಖುಷಿ. ಕೆಲವರಿಗೆ ಆಟ ಆಡುವುದು ಸಮಯವನ್ನು ವ್ಯರ್ಥ ಮಾಡಿದ ಹಾಗೆ ಅನಿಸುತ್ತದೆ. ಆದರೆ ಆಟದ ಲಾಭಗಳು ಅದರ ನ್ಯೂನತೆಗಳ ತುಲನೆಯಲ್ಲಿ ಅಪಾರವಾಗಿದೆ.
ವಿಶ್ವದ ಕಿರಿಯ ವಾಟರ್ ಸ್ಕೀಯರ್ ಎಂದು ಎನಿಸಿಕೊಂಡಿದ್ದಾನೆ. ಮಗುವಿನ ಪೋಷಕರಾದ ಕೇಸಿ ಮತ್ತು ಮಿಂಡಿ ಹಂಫೆರಿನ್ ತಮ್ಮ ಇನ್‍ಸ್ಟಾಗ್ರಾಂ ನಲ್ಲಿ ತಮ್ಮ ಪುಟ್ಟ ಕಂದನ ಫೋಟೋ ಹಾಗೂ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಮುದ್ದು ಮುದ್ದಾಗಿ ಈ ಕಂದನ ಮುಖದಲ್ಲಿ ಅದನೋ ಒಂಥಾರ ಖುಷಿ ಕುಣಿದು ಕುಪ್ಪಳಿಸುತ್ತಿತ್ತು .ಈ ವಿಡಿಯೋನಲ್ಲಿ ರಿಚ್ ಲೈಫ್ ಜಾಕೆಟ್ ಧರಿಸಿ, ಸ್ಕೀಯಿಂಗ್ ಬೋರ್ಡ್ ಸಹಾಯ ತಗೊಂಡು ನಿಂತಿದ್ರೆ, ಆತನ ತಂದೆ ಪಕ್ಕದಲ್ಲೇ ಮತ್ತೊಂದು ಬೋಟ್ನಲ್ಲಿ ನಿಂತು ರಿಚ್ ದಂಪತಿ ತಮ್ಮ ಕಂದನಿಗೆ ಚಿಯರಪ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.