ವಾಕರ್​ನಲ್ಲಿದ್ದ ಮಗುವನ್ನು ರಕ್ಷಿಸಿದ ಬೈಕ್​ ಸವಾರ ➤ ವೈರಲ್ ಆಯ್ತು ಯುವಕ ಸಾಹಸದ ದೃಶ್ಯ

(ನ್ಯೂಸ್ ಕಡಬ) newskadaba.com ಕೊಲಂಬಿಯಾ , ಸೆ. 23:  ಹೆತ್ತವರು ತಮ್ಮ ಪುಟ್ಟ ಮಕ್ಕಳನ್ನು ಎಷ್ಟೇ ಜೋಪಾನವಾಗಿ ನೋಡಿಕೊಂಡರು ಸಾಕಾಗೊದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಎಳೆಯ ಕಂದ ಕಣ್ಣು ತಪ್ಪಿಸಿ ಪೋಷಕರೇ ಬೆಚ್ಚಿ ಬೀಳಿಸುವಂತಹ ಅವಾಂತರವನ್ನೇ ಸೃಷ್ಟಿಮಾಡುತ್ತದೆ. ಇಂತದ್ದೇ ಒಂದು ಘಟನೆ ಇದೀಗಾ ವೈರಲ್ ಆಗಿದೆ.

 

 

ಕೊಲಂಬಿಯಾದ ಫ್ಲೋರೆನ್ಸಿಯಾ ನಗರದಲ್ಲಿ ಸೆಪ್ಟೆಂಬರ್​ 14ರಂದು ಈ ಘಟನೆ ನಡೆದಿದ್ದು, ಮನೆಯ ಮುಂದೆ ಬೇಬಿ ವಾಕರ್​ನಲ್ಲಿ ನಡೆದಾಡುತ್ತಿದ್ದ ಮಗು ನಿಯಂತ್ರಣ ತಪ್ಪಿ ಮನೆ ಮುಂದಿನ ರಸ್ತೆಗೆ ಇಳಿಯುತ್ತದೆ. ನೋಡ ನೋಡುತ್ತಲೇ ಮಗುವಿದ್ದ ಬೇಬಿ ವಾಕರ್​ ಇಳಿಜಾರು ಪ್ರದೇಶದತ್ತ ಜಾರಿ ಹೋಗುತ್ತದೆ.ಇಳಿಜಾರು ಪ್ರದೇಶದಲ್ಲಿ ಜಾರಿ ಹೋಗುತ್ತಿದ್ದ ಮಗುವೊಂದನ್ನು ಬೈಕ್​ ಸವಾರನೊಬ್ಬ ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆಗೆ ಒಳಗಾಗಿದೆ. ಬೈಕ್ ಸವಾರನ ಈ ಸಾಹಸಮಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಗುವನ್ನು ರಕ್ಷಿಸಿ ಮಾನವೀಯತೆ ಮೆರೆದ ಬೈಕರ್​ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.​​

Also Read  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ- 15 ಸಾಹಿತಿಗಳು ಅಕಾಡೆಮಿ ಪ್ರಶಸ್ತಿಗೆ ಆಯ್ಕೆ

 

 

 

error: Content is protected !!
Scroll to Top