ಉಡುಪಿ : ನೇಕಾರರ ಕುಟುಂಬದ ನೆರವಿಗೆ ನಿಂತ ನಟಿ ಪ್ರಣೀತಾ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 22:  ಉಡುಪಿಯಲ್ಲಿ ಪಾರಂಪರಿಕ ಯಕ್ಷಗಾನ ಉಡುಗೆ ನೇಯುತ್ತಿದ್ದ 72 ವರ್ಷ ವಯಸ್ಸಿನ ಲಕ್ಷ್ಮಣ ಶೆಟ್ಟಿಗಾರ್ ಎಂಬ ನೇಕಾರರ ಕುಟುಂಬ ಕೆಲವು ದಿನಗಳಿಂದ ಸುರಿದ ಭಾರಿ ಮಳೆಗೆ ಸಿಳುಕಿ ಸಂಕಷ್ಟದಲ್ಲಿದ್ದಾರೆ. ಇಂಥಾಹ ಸಂದರ್ಭದಲ್ಲಿ ವರಿಗೆ ತಕ್ಷಣಕ್ಕೆ ಬೇಕಾಗುವ ಸಹಾಯ ಒದಗಿಸುವ ಅಭಯವನ್ನು ನಟಿ ಪ್ರಣೀತಾ ಸುಭಾಷ್ ರವರು ನೀಡಿದ್ದಾರೆ.

 

ಆ ಕುಟುಂಬದವರ ಖಾತೆಗೆ ನೇರವಾಘಿ ಹಣ ಸಂದಾಯ ಮಾಡುತ್ತೇನೆ . ಈ ಕುಟುಂಬವೂ ಸೇರಿದಂತೆ ನೆರೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಹೆಚ್ಚಿನ ನೆರವು ನೀಡಿ ಎಂದು ಎಲ್ಲರಲ್ಲೂ ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ,  ಕರಾವಳಿಯ ಗಂಡು ಕಲೆ ಯಕ್ಷಗಾನ ವಿಶ್ವಪ್ರಸಿದ್ದಿಯಾರೂ ಅದಕ್ಕೆ ಬೇಕಾದ ಪಾರಂಪರಿಕ ಕೈ ಮಗ್ಗದ ಉಡುಗೆ ತಯಾರಿಸುವವರು ಕೆಲವೇ ಮಂದಿ. ಅಂತವರಲ್ಲಿ ಲಕ್ಷ್ಮಣ ಶೆಟ್ಟಿಗಾರ್ ಮತ್ತು ಅವರ ಪತ್ನಿ ಯಕ್ಷಗಾನದ ಕೈ ಮಗ್ಗ ಸೀರೆಗಳನ್ನು ನೇಯುತ್ತಾ ಅದರಲ್ಲೇ ಬದುಕು ಕಟ್ಟಿಕೊಂಡವರು. ಈಗ ಉಡುಪಿಯಲ್ಲಿ ಭಾರೀ ಮಳೆಯ ಹಿನ್ನಲೆಯಿಂದಾಗಿ ಅವರ ಮನೆಯು ಕಲಾವೃತವಾಗಿದೆ. ನೇಯ್ಗೆ ಯಂತ್ರಗಳು ಕೈಕೊಟ್ಟಿದೆ.ಹೀಗಿರುವಾಗ ನಟಿ ಪ್ರಣೀತಾ ಸುಭಾಷ್ ರವರು ಅವರ ಸಹಾಯಕ್ಕೆ ಧಾವಿಸಿ ಇತರರಿಗೆ ಮಾದರಿಯಾಗಿದ್ದಾರೆ.

Also Read  ಸಮಾಜ ಕಲ್ಯಾಣ ಇಲಾಖಾ ವತಿಯಿಂದ ➤ ಹಾಸ್ಟೆಲ್ ಗೆ ಬಾಡಿಗೆ ಕಟ್ಟಡ ಆಹ್ವಾನ

 

 

error: Content is protected !!
Scroll to Top