ಕಡಬ ತಾಲೂಕಿನ ಪಂಜದ ತೊಂಡಚ್ಚನ್ ಇಂಡಸ್ಟ್ರೀಸ್ ನ ಮಾಲಕ ಮನು ಪಂಜ ಮತ್ತು ಆಶಾ ದಂಪತಿಯ ಎರಡು ವರುಷದ ಪುತ್ರ ಆರವ್ ನ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಯಿತು.
ಕೇಕ್ ಕಟ್ ಮಾಡುವ ಬದಲಾಗಿ, ತಮ್ಮದೇ ತೊಂಡಚ್ಚನ್ ಇಂಡಸ್ಟ್ರೀಸ್ ನ ಸಿಬ್ಬಂದಿಗಳಿಗೆ ಇಮ್ಯೂನಿಟಿ ಬೂಸ್ಟರ್ ಮಾತ್ರೆಗಳನ್ನು ವಿತರಿಸುವ ಮೂಲಕ ಆರವ್ ರವರ ಹುಟ್ಟು ಹಬ್ಬವನ್ನು ಪಂಜದ ಕೃಷ್ಣನಗರದಲ್ಲಿರುವ ತೊಂಡಚ್ಚನ್ ತೊಂಡಚ್ಚನ್ ಇಂಡಸ್ಟ್ರೀಸ್ ನಲ್ಲಿ ಆಚರಿಸಿದರು. ಈ ಮೂಲಕ ಕೋವಿಡ್ 19 ವಿರುದ್ಧ ಹೋರಾಡುವ ಸಂದೇಶವನ್ನು ಸಾರಿದ್ದಾರೆ.