ಫೇಸ್​ಬುಕ್ ಗೆಳತಿ ಭೇಟಿಗೆ ದೂರದಿಂದ ಬಂದ ಯುವಕ ➤ ಗೆಳತಿ ಕಂಡು ಬೆಚ್ಚಿ ಬಿದ್ದು ಚಾಕು ಎಸೆದ.!!

(ನ್ಯೂಸ್ ಕಡಬ) newskadaba.com ಕಾಸರಗೋಡು, ಸೆ. 22:  ಫೇಸ್​ಬುಕ್​ನಲ್ಲಿ ಪರಿಚಯವಾದ ಗೆಳತಿಯನ್ನು ಭೇಟಿಯಾಗಲು 283 ಕಿ.ಮೀ.ದೂರದ ತ್ರಿಶೂರ್​ನಿಂದ ಕಾಸರಗೋಡಿನ ಬೇಕಲಕ್ಕೆ ಬಂದ ಯುವಕ ದಂಗಾಗಿದ್ದಾನೆ.

 

 

ಸಾಮಾಜಿಕ ಜಾಲತಾಣದಲ್ಲಿ 18ರ ಹರೆಯದ ಯುವತಿಯಾಗಿ ತನ್ನನ್ನು ತಾನು ಪರಿಚಯಿಸಿಕೊಂಡಿದ್ದ ಆಕೆ 50 ವರ್ಷದ ಗೃಹಿಣಿ ಎಂದು ತಿಳಿದ ಯುವಕ, ತಾನು ಮೋಸಹೋದುದನ್ನು ತಿಳಿದು ತನ್ನಲ್ಲಿದ್ದ ಚಾಕುವನ್ನು ಆಕೆಯತ್ತ ಎಸೆದ ಘಟನೆ ನಡೆದಿದೆ.ಚಾಟಿಂಗ್ ಸಮಯದಲ್ಲಿ ಆಕೆಗೆ ಹಂತಹಂತವಾಗಿ ಕಳುಹಿಸಿದ್ದ 50 ಸಾವಿರ ರೂ ಕಳುಹಿಸಿದ್ದಾನೆ. ಇದನ್ನ ಮರು ಪಾವತಿಸುವಂತೆ ಕೇಳಿದಾಗ ಮಹಿಳೆ ತಕರಾರು ಮಾಡಿದ್ದಾಳೆ. ಬಳಿಕ ಠಾಣೆಯಲ್ಲಿ ದೂರು ದಾಖಲಾಗಿದ್ದು ಆತನಿಂದ ಪಡೆದ ಮೊತ್ತದಲ್ಲಿ ಅರ್ಧದಷ್ಟನ್ನು ವಾಪಸ್ ಕೊಡಲು ಮಹಿಳೆಗೆ ತಾಕೀತು ಮಾಡಿ ಪ್ರಕರಣ ಮುಕ್ತಾಯಗೊಳಿಸಿದರು.

Also Read  ಗ್ಯಾರಂಟಿ ಯೋಜನೆಗಳಿಗೆ ಎಸ್ ಸಿ/ಎಸ್ ಟಿ ಅನುದಾನ ಬಳಕೆ..! ಕಾಂಗ್ರೆಸ್ ಜೊತೆ ಮುನಿಸಿಕೊಂಡಿರುವ ದಲಿತ ವಿಚಾರವಾದಿಗಳು..!

 

error: Content is protected !!
Scroll to Top