ಕೊರೋನಾದಿಂದ ಮೃತಪಟ್ಟ ಕಡಬದ ವ್ಯಕ್ತಿ ➤ ಪಿಎಫ್ಐ ಕಾರ್ಯಕರ್ತರಿಂದ ಅಂತ್ಯಕ್ರಿಯೆ

(ನ್ಯೂಸ್ ಕಡಬ) newskadaba.com ಕಡಬ, ಸೆ.22. ಕೊರೋನಾ ಸೋಂಕಿನಿಂದ ಮೃತಪಟ್ಟ ಕಡಬ ತಾಲೂಕಿನ ಪೆರ್ಲದಕೆರೆ ಮೂಲದ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಸರ್ಕಾರದ ಎಲ್ಲಾ ಮಾರ್ಗಸೂಚಿ ಮತ್ತು ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ ಗೌರವಯುತವಾಗಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಿದ್ದೀಕ್ ನೆಲ್ಯಾಡಿ ನೇತೃತ್ವದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಡಬ ವಲಯದ ಕೊರೋನಾ ವಾರಿಯರ್ಸ್‌ ತಂಡದ ನೌಷದ್ ಕಡಬ, ಸಮದ್ ಕೋಡಿಂಬಾಳ, ನವಾಜ್ ಕಡಬ, ಶರೀಫ್ ಕಡಬ ಹಾಗೂ ಮೃತ ವ್ಯಕ್ತಿಯ ಕುಟುಂಬಸ್ಥರ ಸಹಕಾರದಿಂದ ಹಿಂದೂ ಸಮುದಾಯದ ಧಾರ್ಮಿಕ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ಅಂತ್ಯಕ್ರಿಯೆಯನ್ನು ಕಡಬದ ಪೆರ್ಲದಕೆರೆಯಲ್ಲಿ ನಡೆಸಲಾಯಿತು.

Also Read  ರಕ್ತಚಂದನ ಮರದ ದಿಮ್ಮಿ ಅಕ್ರಮ ದಾಸ್ತಾನು ಪ್ರಕರಣ ➤‌ ಆರೋಪಿಗಳ ಜಾಮೀನು ಅರ್ಜಿ ವಜಾ

error: Content is protected !!
Scroll to Top