ನೌಕಾಪಡೆಯಿಂದ ಐತಿಹಾಸಿಕ ನಡೆ ➤ ಯುದ್ಧನೌಕೆಯಲ್ಲಿ ಮಹಿಳಾ ಅಧಿಕಾರಿಗಳ ನಿಯೋಜನೆ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 22:  ದೇಶದ ಇತಿಹಾಸಲ್ಲೇ ಪ್ರಪ್ರಥಮ ಬಾರಿಗೆ ಇಬ್ಬರು ಮಹಿಳಾ ಅಧಿಕಾರಿಗಳನ್ನ ನೌಕಾ ಪಡೆಯ ಯುದ್ಧನೌಕೆಯಲ್ಲಿ ನಿಯೋಜನೆ ಮಾಡಲಾಗ್ತಿದೆ. ಸಬ್​ ಲೆಫ್ಟಿನೆಂಟ್​​ಗಳಾದ​​ ಕುಮುದಿನಿ ತ್ಯಾಗಿ ಹಾಗೂ ರಿತಿ ಸಿಂಗ್​​​ ಯುದ್ಧನೌಕೆಯಲ್ಲಿ ನಿಯೋಜನೆಗಳಲ್ಲಿರೋ ಭಾರತದ ಮೊಟ್ಟ ಮೊದಲ ಮಹಿಳೆಯರೆನಿಸಿಕೊಳ್ಳಲಿದ್ದಾರೆ.

ಇವರಿಬ್ಬರೂ ಹೆಲಿಕಾಪ್ಟರ್​​​ ಸ್ಟ್ರೀಮ್​ನಲ್ಲಿ ಅಬ್ಸರ್ವರ್ಸ್​(ಏರ್​​ಬೋರ್ನ್​ ಟ್ಯಾಕ್ಟೀಶಿಯನ್ಸ್)​​ ಆಗಿ ಸೇರ್ಪಡೆಗೊಳ್ಳಲು ಆಯ್ಕೆಯಾಗಿದ್ದಾರೆ. ಮುಂದೆ ಕುಮುದಿನಿ ಹಾಗೂ ರಿತಿ ಅವರು ನೌಕೆಯ ಹೊಸ ಎಂಎಚ್​​-60 ಹೆಲಿಕಾಪ್ಟರ್​​ಗಳ ಹಾರಾಟ ನಡೆಸುವ ನಿರೀಕ್ಷೆ ಇದೆ ಅಂತ ವರದಿಯಾಗಿದೆ. ಕೊಚ್ಚಿಯಲ್ಲಿ ಐಎನ್​ಎಸ್​​ ಗರುಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರಿಗೂ, ಅಬ್ಸರ್ವರ್ಸ್​ ಆಗಿ ಗ್ರಾಜುಯೇಟ್​ ಆಗಿದ್ದಕ್ಕೆ ‘ವಿಂಗ್ಸ್’​​ ಪ್ರದಾನ ಮಾಡಲಾಯ್ತು.ಈಗಾಗಲೇ ಭಾರತ ನೌಕಾಪಡೆಯಲ್ಲಿ ಸಾಕಷ್ಟು ಮಹಿಳಾ ಅಧಿಕಾರಿಗಳು ಇದ್ದಾರೆ.

 

 

ಆದ್ರೆ ಈವರೆಗೆ ಯುದ್ಧನೌಕೆಗಳಲ್ಲಿ ಮಹಿಳಾ ಅಧಿಕಾರಿಗಳನ್ನ ನಿಯೋಜನೆ ಮಾಡಿರಲಿಲ್ಲ.ಇದೀಗ ಇಬ್ಬರು ಮಹಿಳೆಯರನ್ನ ಯುದ್ಧನೌಕೆಯಲ್ಲಿ ನಿಯೋಜಿಸುವ ಮೂಲಕ ಮಹಿಳೆಯರು ಕೂಡ ಆಕಾಶದೆತ್ತರಕ್ಕೆ ಬೆಳೆಯಲು ‘ರೆಕ್ಕೆ’ ನೀಡಿ ಭಾರತ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದಿದೆ. ಮತ್ತೊಂದೆಡೆ ರಫೇಲ್​ ಯುದ್ಧವಿಮಾನಗಳ ಹಾರಾಟಕ್ಕೆ ಭಾರತೀಯ ವಾಯುಸೇನೆ, ಮಹಿಳಾ ಫೈಟರ್​ ಪೈಲೆಟ್​​ವೊಬ್ಬರ ಹೆಸರನ್ನ ಶಾರ್ಟ್​​ಲಿಸ್ಟ್​ ಮಾಡಿದೆ ಎಂದು ವರದಿಯಾಗಿದೆ.

 

error: Content is protected !!

Join the Group

Join WhatsApp Group