(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 22: ಸಿಸಿಬಿ ಅಧಿಕಾರಿಗಳ ತಂಡ ತೀವ್ರವಾಗಿ ತನಿಖೆಯಲ್ಲಿ ಭಾಗಿಯಾಗಿರುವಾಗಲೇ ಸ್ಯಾಂಡಲ್‌ವುಡ್ ಡ್ರಗ್ ಜಾಲದ ಸಂಬಂಧ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಹೆಚ್ಚಿನವರನ್ನ ವಿಚಾರಣೆಗೊಳಪಡಿಸಿದ್ದಾರೆ.

ಈಗಾಗಲೇ ಲಾಸ್ ಮಾದ ಯೋಗಿ ಮತ್ತು ಕ್ರಿಕೆಟರ್ ಅಯ್ಯಪ್ಪ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದೆ. ಇದೀಗಾ ಬ್ರಹ್ಮ ಗಂಟು ಧಾರಾವಾಹಿಯ ನಾಯಕ ನಟಿ ಗೀತಾ ಭಾರತಿ ಭಟ್ ಗೆ ವಿಚಾರಣೆಗೆ ಹಾಜರಾಗಲು ಆಂತರಿಕ ಭದ್ರತಾ ವಿಭಾಗದ ಕಡೆಯಿಂದ ನೋಟಿಸ್ ನೀಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ” ನನಗೆ ನೋಟಿಸ್ ನೀಡಿರೋದು ಶಾಕ್ ಉಂಟು ಮಾಡಿದೆ. ಯಾಕೆ ನೋಟಿಸ್ ನೀಡಿದ್ದಾರೆ ಗೊತ್ತಿಲ್ಲ. ನಾನು ವಿಚಾರಣೆಗೆ ಹಾಜರಾಗ್ತೀನಿ ಎಂದು ಹೇಳಿದ್ದಾರೆ.