ಸುಳ್ಯ: ತಡೆಗೋಡೆ ಕುಸಿತ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 21. ಕಳೆದರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ತಡೆಗೋಡೆಯೊಂದು ಕುಸಿದು ಬಿದ್ದ ಘಟನೆ ಇಲ್ಲಿನ ಭಸ್ಮಡ್ಕ ಎಂಬಲ್ಲಿಂದ ವರದಿಯಾಗಿದೆ.

ಗೋಪಿ ಎಂಬವರ ಮನೆಯ ತಡೆಗೋಡೆ ಕುಸಿದು ಪಕ್ಕದಲ್ಲಿರುವ ಶಾಂತಪ್ಪ ಎಂಬವರ ಮನೆಯ ಅಂಗಳಕ್ಕೆ ಬಿದ್ದಿದ್ದು, ಇದೀಗ ತಡೆಗೋಡೆಯು ಇನ್ನಷ್ಟು ಅಪಾಯದ ಮಟ್ಟದಲ್ಲಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಅನಂತ ಶಂಕರ್, ವಾರ್ಡ್ ಸದಸ್ಯ ಸುಧಾಕರ ಕುರುಂಜಿಬಾಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ದಿಲೀಪ್ ವೇದಿಕ್ ಗೆ ಕಾವ್ಯಶ್ರೀ ಪ್ರಶಸ್ತಿ ಪ್ರಧಾನ

error: Content is protected !!
Scroll to Top