ಬೈಕ್​ನಿಂದ ಬಿದ್ದು ಸ್ಥಳದಲ್ಲೇ ಶಿಕ್ಷಕ ಮೃತ್ಯು..!!

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಸೆ. 21:  ಚಲಿಸುತ್ತಿದ್ದ ಬೈಕ್‌ನಿಂದ ಬಿದ್ದು ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದಿದೆ. ಮೃತಪಟ್ಟವರನ್ನು ಮಧುವನಹಳ್ಳಿ ನಿವಾಸಿ ಮಹದೇವಶೆಟ್ಟಿ(57) ಎಂದು ಗುರುತಿಸಲಾಗಿದೆ

 

ಕೊಳ್ಳೇಗಾಲ ಪಟ್ಟಣದ ಮಾರ್ಗವಾಗಿ ಬೈಕ್​ನಲ್ಲಿ ತೆರಳುತ್ತಿದ್ದ ಮಧುವನಹಳ್ಳಿ ಗ್ರಾಮದ ಶಿಕ್ಷಕ ಮಹದೇವಶೆಟ್ಟಿ ಬೈಕ್​ನಿಂದ ಬಿದ್ದಿದ್ದಾರೆ. ಈ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕ್ರೂರವಾಗಿ ಮೂರು ಮೇಕೆಗಳನ್ನು ಬಲಿ ನೀಡಿದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

error: Content is protected !!
Scroll to Top