ಎಸ್ಡಿಪಿಐ ಆತೂರು ವಲಯ ಸಮಿತಿ ಕಾರ್ಯಕರ್ತರ ಸಭೆ ➤ ಫ್ಯಾಸಿಸ್ಟರನ್ನು ಸೋಲಿಸುವುದೇ ನಮ್ಮ ಗುರಿ – ಅಶ್ರಫ್ ಮಾಚಾರ್

(ನ್ಯೂಸ್ ಕಡಬ) newskadaba.com ಕಡಬ, ಸೆ. 21. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆತೂರು ವಲಯ ಸಮಿತಿ ಇದರ ವತಿಯಿಂದ ಕಾರ್ಯಕರ್ತರ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಎಸ್‌.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯರಾದ ಅಶ್ರಫ್ ಮಾಚಾರ್ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ದೇಶವನ್ನು ಅಧೋಗತಿಗೆ ತಂದು ಮುಟ್ಟಿಸಿದೆ. ಯುವಜನತೆಗೆ ನೌಕರಿಯಿಲ್ಲ, ದೇಶದ ಜಿಡಿಪಿಯು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಪಾತಾಳಕ್ಕಿಳಿದಿದೆ. ದೌರ್ಜನ್ಯ, ಅತ್ಯಾಚಾರ, ಗುಂಪು ಹತ್ಯೆ ನಿರಂತರ ವಾಗಿದೆ. ಸರಕಾರದ ಅನ್ಯಾಯದ ವಿರುದ್ಧ ಮಾತನಾಡಿದರೆ ಅವರನ್ನೇ ಅಪರಾಧಿಗಳನ್ನಾಗಿಸಿ ಜೈಲಿಗೆ ಅಟ್ಟಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಫ್ಯಾಸಿಸ್ಟರನ್ನು ಸೋಲಿಸಿ ನೈಜ ಜಾತ್ಯಾತೀತ ರಾಷ್ಟ್ರ ಕಟ್ಟುವುದೇ ಎಸ್‌ಡಿಪಿಐ ಪಕ್ಷದ ಗುರಿಯಾಗಿದೆ ಎಂದರು.

Also Read  ಸುಳ್ಯ: ಗ್ರಾಮ ಪಂಚಾಯತ್ ಚುನಾವಣೆ ಹಿನ್ನಲೆ ➤ ನ.22 ರಂದು ಮಾಜಿ ಅಡ್ವೊಕೇಟ್ ಜನರಲ್ ಶ್ರೀ ಎ.ಎಸ್.ಪೊನ್ನಣ್ಣರವರು ಭೇಟಿ

ಅದೇ ರೀತಿ ತಳ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ನಿಮ್ಮೂರಿನ ಶ್ರೇಯಾಭಿವೃದ್ದಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿ ಎಂದು ಕರೆಯಿತ್ತರು. ಈ ಸಂದರ್ಭದಲ್ಲಿ ಆತೂರು ವಲಯ ಸಮಿತಿ ಅಧ್ಯಕ್ಷರಾದ ಇಸ್ಮಾಯಿಲ್ ಆತೂರು, ಕಡಬ ತಾಲೂಕು ಸಮಿತಿ ಜೊತೆ ಕಾರ್ಯದರ್ಶಿ ಬಶೀರ್ ಹಲ್ಯಾರ, ವಲಯ ಸಮಿತಿ ಕಾರ್ಯದರ್ಶಿ ಹಫೀಜ್ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top