ಪುತ್ತೂರು : ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಅಕ್ಕಿ ಸಹಿತ ಲಾರಿ ಪೊಲೀಸ್ ವಶಕ್ಕೆ..!!

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 21:  ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿಯೊಂದನ್ನು ಕಳೆದ ರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ಧಾರೆ. ದಾಖಲೆ ಪತ್ರಗಳಿಲ್ಲದೆ 9,250 ಕಿಲೋ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ಪುತ್ತೂರು ನಗರಠಾಣೆ ಪೊಲೀಸರು ಭಾನುವಾರ ರಾತ್ರಿ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

 

 

ಮಾಣಿ-ಮೈಸೂರು ಹೆದ್ದಾರಿಯ ಪೋಳ್ಯದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಪುತ್ತೂರು ಕಡೆಯಿಂದ ಬಂದ ಕೆಎ 21 ಸಿ 4647 ನೋಂದಣಿ ಸಂಖ್ಯೆಯ ಲಾರಿಯನ್ನು ತಡೆಯಲಾಗಿತ್ತು. ಪರಿಶೀಲಿಸಿದಾಗ ಅವರ ಬಳಿ ಅಕ್ಕಿ ಸಾಗಣೆಗೆ ದಾಖಲೆಗಳಿಲ್ಲದೇ ಇರುವುದು ಖಚಿತವಾಗಿದೆ. ಈ ಕುರಿತು ತಹಸೀಲ್ದಾರ್​ ಅವರಿಗೆ ಮಾಹಿತಿ ನೀಡಿದ್ದರು. ಅವರ ಸೂಚನೆಯಂತೆ ಆಹಾರ ನಿರೀಕ್ಷಕರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು.

Also Read  ಸವಣೂರು: ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ►ಬ್ರಹ್ಮಕಲಶೋತ್ಸವ ಸವಣೂರಿನ ಹಬ್ಬ- ಸೀತಾರಾಮ ರೈ

error: Content is protected !!
Scroll to Top