ಪುತ್ತೂರು :ಗಾಂಜಾ ನಶೆಯಲ್ಲಿದ್ದ ಇಬ್ಬರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.21: ಮುಕ್ರಂಪಾಡಿ ಬಸ್‌ ತಂಗುದಾಣದಲ್ಲಿ ಗಾಂಜಾ ನಶೆಯಲ್ಲಿದ್ದ ವೇಳೆ ಬಂಧಿತರಾಗಿರುವ ಆರೋಪಿಗಳಿಬ್ಬರನ್ನು ನ್ಯಾಯಾಲಯ ಒಂದು ದಿನದವಧಿಗೆ ಪೊಲೀಸ್‌ ಕಸ್ಟಡಿಗೆ ನೀಡಿದೆ.ಮಂಜೇಶ್ವರ ತಾಲೂಕು ಉಪ್ಪಳ ಪಪ್ಪಾಯಿತೊಟ್ಟಿಯ ರಹಿಮಾನ್‌ ಖಾನ್(44ವ.) ಹಾಗೂ ಮಂಜೇಶ್ವರ ತಾಲೂಕು ಹೊಸಂಗಡಿ ಬಜ್ಜೆಂಗಳ ಅಬ್ದುಲ್ಲಾ ರವರು ಕಳೆದ ದಿನದಂದು ಸಂಜೆ ಮುಕ್ರಂಪಾಡಿ ಬಸ್‌ ತಂಗುದಾಣದ ಬಳಿ ನಿಲ್ಲಿಸಿದ್ದ ಕಾರೊಂದರ ಬಳಿ ಗಾಂಜಾ ನಶೆಯಲ್ಲಿದ್ದು ಅನುಚಿತವಾಗಿ ವರ್ತಿಸುತ್ತಿದ್ದ ಕುರಿತು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಎಸ್‌.ಐ. ಜಂಬುರಾಜ್‌ ಮಹಾಜನ್‌ ಅವರು ಅಲ್ಲಿದ್ದ ಆರೋಪಿಗಳನ್ನು ಹಾಗೂ ಅವರಲ್ಲಿದ್ದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದರು. ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳ ಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಕುರಿತು ವೈದ್ಯರು ವರದಿ ನೀಡಿದ್ದ ಹಿನ್ನಲೆಯಲ್ಲಿ ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು 1 ದಿನ ಪೊಲೀಸ್‌ ಕಸ್ಟಡ್‌ ಗೆ ತಿಳಿಸಿದೆ.

Also Read  ಇನ್ನು ಮುಂದೆ ವಾಟ್ಸಾಪ್ ಮೂಲಕ ಗ್ಯಾಸ್ ಬುಕ್ ಮಾಡಿ ➤ ಹೇಗೆಂದು ತಿಳಿಯಬೇಕೆ..?

error: Content is protected !!
Scroll to Top