ಮೆಕ್ಸಿಕೋ ಭಾರೀ ಭೂಕಂಪ ► ಮೃತಪಟ್ಟವವರ ಸಂಖ್ಯೆ 149ಕ್ಕೆ ಏರಿಕೆ

 (ನ್ಯೂಸ್ ಕಡಬ) newskadaba.com ಮೆಕ್ಸಿಕೋ, ಸೆ.20, ಮಂಗಳವಾರದಂದು ಸತತ ಎರಡನೇ ಬಾರಿಗೆ ಸಂಭವಿಸಿದ ಭಾರೀ ಭೂಕಂಪದಲ್ಲಿ ಮೃತಪಟ್ಟವವರ ಸಂಖ್ಯೆ 149ಕ್ಕೆ ಏರಿಕೆಯಾಗಿದೆ.

ರಿಕ್ಟರ್ ಮಾಪಕದಲ್ಲಿ 7.1ರಷ್ಟು ತೀವ್ರತೆಯ ಕಂಪನ ದಾಖಲಾಗಿದೆ. 51 ಕಿಲೋ ಮೀಟರ್ ಆಳದ ಭೂಗರ್ಭದಲ್ಲಿ ಘಟಿಸಿರುವ ಕಂಪನಕ್ಕೆ ಸುಮಾರು 49 ಗಗನಚುಂಬಿ ಕಟ್ಟಡಗಳು ಧರೆಗೆ ಉರುಳಿವೆ ಎಂದು ವರದಿಯಾಗಿದೆ.

ಕಂಪನ ಆಗ್ತಿದಂತೆ ಜನರು ಕಟ್ಟಡಗಳಿಂದ ಹೊರಗೆ ಓಡಿಹೋಗಿದ್ದಾರೆ. ಆದರೆ ಅವರ ಮೇಲೂ ಕಟ್ಟಡಗಳು ಉರುಳಿಬಿದ್ದಿವೆ. ರಸ್ತೆಗಳಲ್ಲಿ ನಿಲ್ಲಿಸಿದ್ದ ಕಾರುಗಳು ಜಖಂ ಆಗಿವೆ. ವಿಚಿತ್ರ ಅಂದ್ರೆ ಇದೇ ದಿನ 32 ವರ್ಷಗಳ ಹಿಂದೆ 1985ರಂದು 8ರಷ್ಟು ತೀವ್ರತೆಯ ಭೂಕಂಪವಾಗಿತ್ತು. ಆ ಮಹಾ ದುರಂತದಲ್ಲಿ 5 ಸಾವಿರ ಮಂದಿ ಸಾವನ್ನಪ್ಪಿದ್ದರು. ಘಟನೆಯಲ್ಲಿ ಸಿಲುಕಿರುವ ಕೆಲವರು ತಮ್ಮ ವಾಟ್ಸಪ್ ನಲ್ಲಿ ಮೆಸೇಜ್ ಮಾಡೋ ಮೂಲಕ ಸಹಾಯಕ್ಕಾಗಿ ತಮ್ಮ ಕುಟುಂಬದವರನ್ನು ಅಂಗಲಾಚಿದ್ದಾರೆ.

Also Read  ಕರಾಚಿ: ಶೂಟೌಟ್ ಗೆ ಇಬ್ಬರ ಬಲಿ ➤ ಪಾಕಿಸ್ತಾನದ ಟಿವಿ ಚಾನೆಲ್ ನ ಆ್ಯಂಕರ್ ಹಾಗೂ ಆತನ ಗೆಳೆಯ

ಮಾರ್ಲೋಸ್ ರಾಜ್ಯದಲ್ಲಿ 64 ಮಂದಿ, ಮೆಕ್ಸಿಕೋ ನಗರದಲ್ಲಿ 36 ಮಂದಿ ಮೃತಪಟ್ಟಿದ್ದಾರೆ. ರೊಮ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಬೆಡ್ ನಲ್ಲಿದ್ದ ರೋಗಿಗಳನ್ನು ವ್ಹೀಲ್‍ಚೇರ್ ಮೂಲಕ ಹೊರಗಡೆ ಕಳುಹಿಸಲಾಗಿದೆ.

ಇಂದು ಭೂಕಂಪ ಪರಿಹಾರದ ಪ್ರಾತ್ಯಕ್ಷಿಕೆ ನಡೆದ ಕೆಲವೇ ಗಂಟೆಗಳಲ್ಲಿ ಮೆಕ್ಸಿಕೋ ಭೂಕಂಪನಕ್ಕೆ ಬೆಚ್ಚಿಬಿದ್ದಿದೆ.

error: Content is protected !!
Scroll to Top