ವಿದ್ಯುತ್ ಬಿಲ್ ಪಾವತಿ ಮಾಡದವರಿಗೆ ಕಾದಿದೆ ಶಾಕ್…‼️ ➤ ನಾಳೆಯಿಂದಲೇ ವಿದ್ಯುತ್ ಕಡಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 19. ವಿದ್ಯುತ್ ಬಿಲ್ ಪಾವತಿಸಲು ಬಾಕಿ ಇರುವ ಸ್ಥಾವರಗಳ ವಿದ್ಯುತ್ ಪೂರೈಕೆಯನ್ನು ನಾಳೆ( ಸೆ. 21) ಯಿಂದ ಸ್ಥಗಿತಗೊಳಿಸಲಾಗುವುದು ಎಂದು ಮೆಸ್ಕಾಂ ಆದೇಶ ನೀಡಿದೆ.

ಕೊರೋನಾ ಸಂಕಷ್ಟದಿಂದ ವಿದ್ಯುತ್ ಬಿಲ್ ವಸೂಲಾತಿಯು ಕುಂಠಿತವಾಗಿದ್ದರಿಂದ ಪಾವತಿಸಲು ಬಾಕಿಯಿರುವ ಬಿಲ್ ಅನ್ನು ಪಾವತಿಸುವಂತೆ ಮನವಿ ಮಾಡಲಾಗಿದೆ. ಗ್ರಾಹಕರಿಂದ ವಸೂಲು ಮಾಡುವ ಕಂದಾಯ ತೆರಿಗೆ ಮೊತ್ತದಲ್ಲಿ ವಿದ್ಯುತ್ ಖರೀದಿ ಸೇರಿದಂತೆ ಎಲ್ಲ ವೆಚ್ಚಗಳನ್ನು ಭರಿಸಲಾಗುತ್ತಿದ್ದು, ಗ್ರಾಹಕರ ಬಿಲ್ ಪಾವತಿ ತಡವಾದಲ್ಲಿ, ವಿದ್ಯುತ್ ಖರೀದಿ ಬಿಲ್‌ ಕಟ್ಟಲು ಮೆಸ್ಕಾಂ ಗೆ ಕಷ್ಟವಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Also Read  ಶಾಲಾ ಮಕ್ಕಳಿಗೆ ಗುಡ್ ನ್ಯೂಸ್! ➤ ಶಿಕ್ಷಣ ಇಲಾಖೆ ಬಿಸಿಯೂಟ, ಕ್ಷೀರ ಭಾಗ್ಯ ಯೋಜನೆಗೆ ಸಿದ್ಧತೆ ಕೈಗೊಳ್ಳಲು ಸೂಚನೆ ನೀಡಿದೆ..!

error: Content is protected !!
Scroll to Top