ತಡರಾತ್ರಿ ಗುಡ್ಡ ಕುಸಿದು ಮನೆ ನೆಲಸಮ ➤ ಅವಷೇಶದಡಿ ಸಿಲುಕಿದ್ದ ಆರು ಮಂದಿಯ ರಕ್ಷಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ20:  ಕರಾವಳಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಲೇಯಿದೆ. ಈಗಾಗಲೇ ಕರಾವಳಿಯ ಕೆಲವು ಭಾಗಗಳಲ್ಲಿ ಮಳೆಯ ಅವಾಂತರಕ್ಕೆ ಅಪಾರ ಪ್ರಮಾಣದ ಹಾನಿಯು ಉಂಟಾಗಿದೆ.

 

 

ಕಳೆದ ತಡರಾತ್ರಿ ವಿಟ್ಲದ ಮಂಗಳಪದವು ಬಳಿಯ ಬಾಬುಕಟ್ಟೆ ಎಂಬಲ್ಲಿ ಗುಡ್ಡವೊಂದು ಕುಸಿದು ಮನೆಯು ಸಂಪೂರ್ಣವಾಗಿ ನೆಲಸಮಗೊಂಡ ಘಟನೆ ನಡೆದಿದೆ. ತರಕಾರಿ ವ್ಯಾಪಾರಿ ಅಬ್ದುಲ್ಲ ಎಂಬುವರ ಮನೆಯ ಪಕ್ಕದಲ್ಲಿದ್ದ ಧರೆ ಕುಸಿದು ಮನೆ ಸಂಪೂರ್ಣವಾಗಿ ನೆಲಸಮವಾಗಿತ್ತು. ಮನೆಯಲ್ಲಿದ್ದ ಆರು ಮಂದಿ ಅವಷೇಶದಡಿಯಲ್ಲಿ ಸಿಲುಕಿದ್ದರು, ತಕ್ಷಣವೇ ಕಾರ್ಯ ಪ್ರವೈತ್ತರಾದ ಆರು ಮಂದಿಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಘಟನೆಯಿಂದಾಗಿ ಮನೆಯಲ್ಲಿದ್ದ ಆರು ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಸಂಘಪರಿವಾರದ ಸದಸ್ಯರಿಂದ ದನ ಕಳ್ಳತನಕ್ಕೆ ಯತ್ನ ➤ ರೆಡ್ ಹ್ಯಾಂಡ್ ಆಗಿ ಹಿಡಿದ ಸ್ಥಳೀಯರು

error: Content is protected !!
Scroll to Top