ನೂಜಿಬಾಳ್ತಿಲ: ಗ್ರಾಮ ಪಂಚಾಯತ್ ನಲ್ಲಿ ನರೇಗಾ ಗ್ರಾಮಸಭೆ

(ನ್ಯೂಸ್ ಕಡಬ) newskadaba.com ಕಡಬ, ಸೆ. 19. ನೂಜಿಬಾಳ್ತಿಲ ಗ್ರಾ. ಪಂ 2020- 21ನೇ ಪ್ರಥಮ ಸಾಲಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಗ್ರಾ ಸಭೆಯು ಇಂದು ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಸಬಾಂಗಣದಲ್ಲಿ ನಡೆಯಿತು.

ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಜೋಸೆಫ್ ಅವರು ನೋಡೆಲ್ ಅಧಿಕಾರಿಯಾಗಿದ್ದು, ಸಭೆಯ ಅದ್ಯಕ್ಷತೆಯನ್ನು ವಹಿಸಿದ್ದರು. ತಾಲೂಕು ಸಂಯೋಜನಾಧಿಕಾರಿ ಚಂದ್ರಶೇಖರ ರವರು ನರೇಗಾ ಯೋಜನೆಯಲ್ಲಿ ಗ್ರಾಮಸ್ಥರಿಗೆ ದೊರಕುವ ಸೌಲಭ್ಯಗಳು ಹಾಗೂ ಸಾರ್ವಜನಿಕ ಕೆಲಸಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

Also Read  ಬೆಳಗಾವಿ- ಮೈಸೂರು ಡೈರೆಕ್ಟ್ ಟ್ರೈನ್‌ಗೆ ಬೇಡಿಕೆ ➤ ರೈಲು ಸಂಚಾರ ಆರಂಭಿಸುವಂತೆ ಆಗ್ರಹ

ಕಡಬ ತಾಲೂಕು ಸಂಯೋಜಕರಾದ ಭರತ್ ರಾಜ್. ಕೆ ಸವಿಸ್ತಾರವಾದ ಮಾಹಿತಿ ನೀಡಿ, ಇಂಜಿನಿಯರ್ ಮನೋಜ್ ಕುಮಾರ್ ಕಾಮಗಾರಿ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು. ಗ್ರಾ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ ಎ ಸ್ವಾಗತಿಸಿ, ಕಾರ್ಯದರ್ಶಿ ಗುರುವ ಯಸ್ ವಂದಿಸಿದರು.

error: Content is protected !!
Scroll to Top