ಮಣಿಪಾಲ : ದರೋಡೆಕೋರರರಿಂದ ಯುವಕನಿಗೆ ಚಾಕು ಇರಿತ

(ನ್ಯೂಸ್ ಕಡಬ) newskadaba.com ಮಣಿಪಾಲ, ಸೆ.19:  ಬೈಕ್ ನಲ್ಲಿ ಬಂದ ತಂಡವೊಂದು ಚಾಕು ತೋರಿಸಿ ಬೆದರಿಸಿ ಮೊಬೈಲ್ ಮತ್ತು ಹಣವನ್ನು ಲೂಟಿ ಮಾಡಿದ ಘಟನೆ ಇಂದು ಬೆಳ್ಳಂಬೆಳಗ್ಗೆ ಮಣಿಪಾಲ ಅಸುಪಾಸಿನಲ್ಲಿ ನಡೆದಿದೆ. ಒಂದು ಘಟನೆ ಅಲೆವೂರು ಗುಡ್ಡೆಯಂಗಡಿ ಬಳಿ ನಡೆದಿದ್ದರೆ, ಮತ್ತೊಂದು ಘಟನೆ ಮಣಿಪಾಲ ಈಶ್ವರ ನಗರದ ಬಿಗ್ ಬಾಸ್ ಬಾರ್ ಬಳಿ ನಡೆದಿದೆ.

ಅಲೆವೂರು ಗುಡ್ಡೆಯಂಗಡಿ ಬಳಿ ರಾತ್ರಿ ಪಾಳಿ ಮುಗಿಸಿ ಮನೆಗೆ ಹೋಗುತ್ತಿದ್ದ ಯುವಕನನ್ನು ಎದುರಿನಿಂದ ಬೈಕ್ ನಲ್ಲಿ ಬಂದ ತಂಡ ಅಡ್ಡಗಟ್ಟಿ, ಬೆಲೆಬಾಳುವ ವಸ್ತು ನೀಡುವಂತೆ ಬೆದರಿಸಿದ್ದರು. ಯುವಕ ನಿರಾಕರಿಸಿದಾಗ ಚಾಕುವಿನಿಂದ ಆತನ ಎದೆಗೆ ಇರಿಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.ಯುವಕ ಬೊಬ್ಬೆ ಹೊಡಿದದ್ದು ಇದರಿಂದ ಬೆದರಿದ ದರೋಡೆಕೋರರು ಯುವಕನ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಚಾಕು ಇರಿತದಿಂದ ಯುವಕನ ಎದೆಯ ಭಾಗಕ್ಕೆ ಸಣ್ಣಗಾಯವಾಗಿದೆ.

Also Read   ಟ್ಯಾಂಕರ್-ಟ್ರಕ್ ನಡುವೆ ಢಿಕ್ಕಿ ➤ ನಾಲ್ವರು ಮೃತ್ಯು

error: Content is protected !!
Scroll to Top