ಎಸ್ಸೆಸ್ಸೆಫ್ ತೆಕ್ಕಾರು ಯುನಿಟ್ ಮಫಾಝ ಕ್ಯಾಂಪ್

(ನ್ಯೂಸ್ ಕಡಬ) newskadaba.com ತೆಕ್ಕಾರು, ಸೆ. 18. ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ SSF ತೆಕ್ಕಾರು ಯುನಿಟ್ ಇದರ ಮಫಾಝ ಕ್ಯಾಂಪ್ ಮತ್ತು ಉಪ್ಪಿನಂಗಡಿ ಡಿವಿಷನ್ ನಾಯಕರ ಯುನಿಟ್ ಮೀಟ್ ಕಾರ್ಯಕ್ರಮವು ತೆಕ್ಕಾರು ಮದ್ರಸಾ ಹಾಲ್ ನಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ನೂರಾರು ಮಂದಿ SSF, SYS ಹಾಗೂ SBS ಕಾರ್ಯಕರ್ತರು, ಹಿತೈಷಿಗಳು ಬಾಗವಹಿಸಿದ್ದರು. BJM ತೆಕ್ಕಾರು ಅಧ್ಯಕ್ಷ M.T ಆದಂ ಬಾಜಾರ್ ಅಧ್ಯಕ್ಷತೆ ವಹಿಸಿ, ಸ್ಥಳೀಯ ಖತೀಬ್ ಹಂಝ ಸಖಾಫಿ ಅಲ್-ಅಝ್ಹರಿ ಉದ್ಘಾಟನೆಗೈದರು. SYS ತೆಕ್ಕಾರು ಬ್ರಾಂಚ್ ಅಧ್ಯಕ್ಷ ಉಸ್ಮಾನ್ ಸ-ಅದಿ, ಮದ್ರಸಾ ಪ್ರಿನ್ಸಿಪಾಲ್ ಇಸ್ಹಾಕ್ ಮದನಿ ಅಳಕೆ ಆಶಂಸ ಭಾಷಣ ಮಾಡಿದರು. SSF ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷ F.H ಮಹಮ್ಮದ್ ಮಿಸ್ಬಾಹಿ ಕಡಬ ತರಗತಿ ಮಂಡಿಸಿದರು. ವೇದಿಕೆಯಲ್ಲಿ ಜಮಾಅತ್ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಅತಾವುಲ್ಲ T.H, ಉಪಾಧ್ಯಕ್ಷ ಮಜೀದ್ S, ಸದಸ್ಯರಾದ ಅಬೂಬಕ್ಕರ್ B.T, ಅಬ್ಬಾಸ್ ಅಜಿರ, ಸಿದ್ದೀಕ್ ಅಮಾನಿ, ಸ್ಥಳೀಯ ಮುಅಲ್ಲಿಂ ಉಸ್ಮಾನ್ ಮುಸ್ಲಿಯಾರ್, SSF ಸರಳಿಕಟ್ಟೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಶಿಹಾಬ್ ಬೈಲಮೇಲು,
SYS ಸರಳಿಕಟ್ಟೆ ಸೆಂಟರ್ ಪ್ರಧಾನ ಕಾರ್ಯದರ್ಶಿ ಸೂಫಿ ಬಾಗ್ಲೋಡಿ, ಅಬ್ದುಲ್ ರಹ್ಮಾನ್ ಮರ್ಝೂಕಿ,
SSF ತೆಕ್ಕಾರು ಶಾಖಾ ಅಧ್ಯಕ್ಷ ನೌಫಲ್ T.H,
ಉಪಾಧ್ಯಕ್ಷರಾದ ನಿಸಾರ್ ಹೊಸಮೊಗ್ರು, ರಝಾಕ್, ಪ್ರಧಾನ ಕಾರ್ಯದರ್ಶಿ ಲತೀಫ್ ಕೆ.ಪಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಆಶಿಕ್ T.H ಸ್ವಾಗತಿಸಿ ವಂದಿಸಿದರು. ಕೆ.ಪಿ ಬಾತಿಶ್ ತೆಕ್ಕಾರು ನಿರೂಪಿಸಿದರು.

Also Read  ಉಳ್ಳಾಲ: ಕೊರಗಜ್ಜನ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಹಾಗೂ ಅವಹೇಳನಕಾರಿ ಬರಹವಿದ್ದ ಫ್ಲೆಕ್ಸ್ ಪತ್ತೆ..! ➤ ಆರೋಪಿಗಳನ್ನು ಬಂಧಿಸುವಂತೆ ಮನವಿ

error: Content is protected !!
Scroll to Top