ಫೋಟೋಗೀಳಿಗೆ ಜಲಪಾತಕ್ಕೆ ಬಿದ್ದು ಪ್ರಾಣತೆತ್ತ ಯುವಕ

(ನ್ಯೂಸ್ ಕಡಬ) newskadaba.com ಹಾಸನ, ಸೆ.19:  ಸೆಲ್ಪಿ, ಫೋಟೋ ಗೀಳಿಗೆ ಬಿದ್ದು ಅದೆಷ್ಟೋ ಮಂದಿ ತಮ್ಮ ಪ್ರಾಣವನ್ನೆ ಕಳೆದುಕೊಂಡಿರುವುದು ಗೊತ್ತೇಯಿದೆ. ಹಾಸನದಲ್ಲೋಬ್ಬ ಯುವಕ ಫೋಟೋ ಗೀಳಿಗೆ ಬಿದ್ದು ಬಲಿಯಾಗಿದ್ದಾನೆ.

 

 

ಫೋಟೋ ತೆಗೆಸಿಕೊಳ್ಳಲು ಹೋಗಿ ಜಲಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ಸಕಲೇಶಪುರ ತಾಲೂಕಿನ ಮಾರನಹಳ್ಳಿ ಗ್ರಾಮದ ರತನ್ ಮೃತ ದುರ್ದೈವಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಇವರು 2ದಿನದ ಹಿಂದೆಯಷ್ಟೆ ಊರಿಗೆ ಬಂದಿದ್ದರು. ಜೊತೆಯಲ್ಲಿದ್ದ ಒಬ್ಬರಿಗೆ ಮೊಬೈಲ್ ಕೊಟ್ಟು ಫೋಟೋ ತೆಗೆಸಿಕೊಳ್ಳುವಾಗ ಕಾಲು ಜಾರಿ ಮೇಲಿಂದ ಬಿದ್ದ ಪರಿಣಾಮ ತಲೆಗೆ ತೀವ್ರ ಗಾಯವಾಗಿ, ನೀರಿನಲ್ಲಿ ಮುಳುಗಿ ಸಾವನ್ನಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಚಾರ್ಮಾಡಿ ಘಾಟ್, ಮುಳ್ಳಯ್ಯನಗಿರಿ ಅಪಾಯಕಾರಿ ಪ್ರದೇಶ; 88 ಕಡೆ ಡೇಂಜರ್- ಸರ್ವೇ ವರದಿ

error: Content is protected !!
Scroll to Top