ಮಾಜಿ ತಾ.ಪಂ.ಸದಸ್ಯ ಹಾಗೂ ಸಿ.ಎ ಬ್ಯಾಂಕ್ ನಿರ್ದೇಶಕ ಉದಯ ಕುಮಾರ್. ಬಿ ನಿಧನ

(ನ್ಯೂಸ್ ಕಡಬ) newskadaba.com ಬಿಳಿನೆಲೆ, ಸೆ‌. 19. ಮಾಜಿ ತಾಲೂಕು ಪಂಚಾಯತ್ ಸದಸ್ಯರು ಹಾಗೂ ಬಿಳಿನೆಲೆ ಸಿ.ಎ. ಬ್ಯಾಂಕಿನ ನಿರ್ದೇಶಕರಾದ ಉದಯ ಕುಮಾರ್. ಬಿ. ಮದೆಪರ್ಲ ಬಿಳಿನೆಲೆ, ಇವರು ಇಂದು ಮುಂಜಾನೆ ಹೃದಯಘಾತದಿಂದ  ದೈವಾಧೀನರಾಗಿರುತ್ತಾರೆ.


ತಾನು ಹುಟ್ಟಿದ ನೆಲದಲ್ಲಿ ಪ್ರತಿಭಾ ವಿಕಸನಕ್ಕೆ ಅವಕಾಶವಿದೆ ಎಂದು ತೋರಿಸಿದ ಸಾಹಸಿ ಉದಯ ಕುಮಾರ್, ಎಳೆಯ ಪ್ರಾಯದಲ್ಲೆ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ, ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್ ಸದಸ್ಯರಾಗಿ ಕ್ಷೇತ್ರದ ಎಲ್ಲಾ ಜನರ ಸಮಸ್ಯೆಗಳಿಗೆ ಅಹೋರಾತ್ರಿ ಸ್ಪಂದಿಸುತ್ತಿದ್ದ ಮನೋಭಾವ ಇವರದ್ದು. ಬಿಳಿನೆಲೆ ನೆಟ್ಟಣ ಪರಿಸರದಲ್ಲಿ ಎಮ್.ಎಲ್. ಎ ಉದಯ ಕುಮಾರ್ ಎಂದು ಗುರುತಿಸಿಕೊಂಡಿದ್ದ ಇವರು ಜನಪ್ರಿಯತೆಗೆ ಸಾಕ್ಷಿಯಾಗಿದ್ದರು.ಮೃತರು ಪತ್ನಿ ಸಂಗೀತಾ ಹಾಗೂ ಇಬ್ಬರು ಪುತ್ರಿಯರನ್ನು ಸೇರಿದಂತೆ ಬಂಧು ಬಳವನ್ನು ಅಗಲಿದ್ದಾರೆ

Also Read  ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ

error: Content is protected !!
Scroll to Top