(ನ್ಯೂಸ್ ಕಡಬ) newskadaba.com ದುಬೈ, ಸೆ. 18. ಕೊರೋನಾ ವೈರಸ್ ರೋಗಿಗಳನ್ನು ಎರಡು ಬಾರಿ ದುಬೈಗೆ ಕರೆದೊಯ್ದ ಆರೋಪದ ಹಿನ್ನೆಲೆ ಏರ್ ಇಂಡಿಯಾ ವಿಮಾನಗಳ ಕಾರ್ಯಾಚರಣೆಯನ್ನು ಸೆಪ್ಟೆಂಬರ್ ಇಂದಿನಿಂದ ಅಕ್ಟೋಬರ್ 3 ರ ತನಕ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಅಲ್ಲದೇ ದುಬೈಗೆ ಹೋದ ಇಬ್ಬರು ಕೊರೋನಾ ರೋಗಿಗಳ ಎಲ್ಲಾ ವೈದ್ಯಕೀಯ ಹಾಗೂ ಕ್ವಾರಂಟೈನ್ ವೆಚ್ಚಗಳನ್ನು ಭರಿಸುವಂತೆ ಏರ್ ಇಂಡಿಯಾಕ್ಕೆ ದಂಡ ವಿಧಿಸಲಾಗಿದೆ. ಕೊರೋನಾ ಪಾಸಿಟಿವ್ ಬಂದಿದ್ದರೂ ಇಬ್ಬರು ಕೊರೋನಾ ಸೋಂಕಿತರನ್ನು ಸಾಗಿಸಿರುವ ಆರೋಪದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ದುಬೈಗೆ 15 ದಿನಗಳ ಕಾಲ ಕಾರ್ಯಾಚರಣೆ ನಡೆಸುವುದಕ್ಕೆ ದುಬೈ ಸಿವಿಲ್ ಏವಿಯೇಷನ್ ಪ್ರಾಧಿಕಾರವು ತಾತ್ಕಾಲಿಕವಾಗಿ ನಿಷೇಧ ಹೇರಿದೆ.