ಅಕ್ರಮ ಗಾಂಜಾ ಮಾರಾಟ ➤ ಮೂವರು ಆರೋಪಿಗಳು ಅರೇಷ್ಟ್

(ನ್ಯೂಸ್ ಕಡಬ) newskadaba.com ಭಟ್ಕಳ, ಸೆ.18:  ಸಾಗರ ರಸ್ತೆಯ ಕಿತ್ರೆ ಕ್ರಾಸ್ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದು ಬಂಧಿತರಿಂದ ಸುಮಾರು 750 ಗ್ರಾಂ ತೂಕದ ಗಾಂಜಾ, ಸ್ಕೂಟಿ, 3 ಮೊಬೈಲ್ ಫೋನ್ ಹಾಗೂ 2700 ರೂ. ನಗದು ವಶಪಡಿಸಿಕೊಂಡಿದ್ದಾರೆ.

 

 

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಭಟ್ಕಳ ಗ್ರಾಮೀಣ ಠಾಣೆ ಪಿಎಸ್​ಐ ಓಂಕಾರಪ್ಪ, ಭಟ್ಕಳ ಶಹರ ಪೊಲೀಸ್ ಠಾಣೆಯ ಪಿಎಸ್​ಐ ಭರತಕುಮಾರ ವಿ., ಎಚ್ ಬಿ. ಕುಡಗುಂಟಿ. ಎಎಸ್​ಐ ರಾಮಚಂದ್ರ ನಾಯಕ ಸೇರಿ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಮಂಕಿ ಹೊನ್ನಾವರದ ನಿವಾಸಿ ಗಣಪತಿ ಮಂಜಪ್ಪ ನಾಯ್ಕ, ಮುರ್ಡೆಶ್ವರ ಹಿರೇದೊಮಿ ನಿವಾಸಿ ಜನಾರ್ದನ ಅಣ್ಣಪ್ಪ ಹರಿಕಂತ್ರ, ಕರಿಕಲ್ ನಿವಾಸಿ ಆನಂದ ಮಾದೇವ ಮೊಗೇರ ಬಂಧಿತರು.

Also Read  ಅಂಬೇಡ್ಕರ್ ಬಗ್ಗೆ ಅವಹೇಳನಾಕಾರಿಯಾಗಿ ಹೇಳಿಕೆ ! ➤ ಆರೋಪಿ ಅರೆಸ್ಟ್

 

error: Content is protected !!
Scroll to Top