ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕಿ ಸಫಿಯಾ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 17. ಮಂಗಳೂರು ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕಿ ಸಫಿಯಾ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ಇಂಪ್ಯಾಕ್ಟ್‌ ಆಫ್‌ ಸೋಷಿಯಲ್‌ ನೆಟ್‌ವರ್ಕಿಂಗ್‌ ಸೈಟ್ಸ್‌ ಅಮಾಂಗ್‌ ಮೀಡಿಯಾ ಪ್ರೊಫೇಶನಲ್ಸ್‌ ಇನ್‌ ಕರ್ನಾಟಕ (ಕರ್ನಾಟಕದ ಮಾಧ್ಯಮ ವೃತ್ತಿಪರರಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ) ಎಂಬ ವಿಷಯದಲ್ಲಿ ಸಫಿಯಾ ಅವರು ಮಾಡಿದ ಸಂಶೋಧನಾ ಕಾರ್ಯಕ್ಕಾಗಿ ಪಿಎಚ್‌ಡಿ ಪದವಿ ನೀಡಲಾಗಿದೆ.

ಸಫಿಯಾ ಅವರು ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದ ಇವರು ದಿವಂಗತ ಎಂ. ಅಬ್ದುಲ್ ಹಮೀದ್ ವೇಣೂರು ಮತ್ತು ರಾಬಿಯಮ್ಮರ ಪುತ್ರಿಯಾಗಿದ್ದು, ನಗರದ ಆನ್‌ ಲೈನ್ ಮಾಧ್ಯಮವೊಂದರ ಸಂಪಾದಕ ನಈಮ್ ಸಿದ್ದೀಖಿಯವರ ಪತ್ನಿ.

Also Read  ಮಂಗಳೂರು: ತುಳುನಾಡಿನ ದೈವ ಕೊರಗಜ್ಜನ ಆಶೀರ್ವಾದ ಪಡೆದ ಡಿ ಬಾಸ್

error: Content is protected !!
Scroll to Top