ಮೋದಿಜೀ ಜನ್ಮ ದಿನದ ಅಂಗವಾಗಿ ಪ್ಲಾಸ್ಮಾ ದಾನ ಮಾಡಿದ ಶಾಸಕ ಭರತ್‌ ಶೆಟ್ಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.17:  ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಅಂಗವಾಗಿ ಗುರುವಾರ ಮಂಗಳೂರು ನಗರ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ.ವೈ ಭರತ್ ಶೆಟ್ಟಿ ಪ್ಲಾಸ್ಮಾ ದಾನ ಮಾಡಿದರು. ‌

 

 

ಈಚೆಗೆ ಕೋವಿಡ್- 19 ನಿಂದ ಗುಣಮುಖರಾಗಿರುವ ಅವರು, ಮಂಗಳೂರಿನ ದೇರಳಕಟ್ಟೆಯಲ್ಲಿರುವ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ ಮಾಡಿದರು. ಪ್ಲಾಸ್ಮಾ ದಾನಕ್ಕಾಗಿ ಅವರು ಬುಧವಾರ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದು, ವೈದ್ಯರ ಒಪ್ಪಿಗೆ ಪತ್ರ ಪಡೆದುಕೊಂಡಿದ್ದರು.ಕೋವಿಡ್‌-19 ನೆಗೆಟಿವ್ ಬಂದು ಗುಣಮುಖರಾಗಿರುವ ವ್ಯಕ್ತಿಗಳ ಪ್ಲಾಸ್ಮಾವನ್ನು ಕೋವಿಡ್ -19 ಸೋಂಕಿತರಿಗೆ ನೀಡುವುದರಿಂದ ಸೋಂಕಿತರು ಶೀಘ್ರ ಗುಣಮುಖರಾಗುತ್ತಾರೆ. ಈ ನಿಟ್ಟಿನಲ್ಲಿ ನಾನು ಮೋದಿ ಜನ್ಮದಿನದ ಅಂಗವಾಗಿ ಪ್ಲಾಸ್ಮಾ ದಾನ ಮಾಡಿದ್ದೇನೆ’ ಎಂದು ಅವರು ತಿಳಿಸಿದರು.

Also Read  ಬೈಕ್ ಡಿಕ್ಕಿ ► ಯುವಕರಿಬ್ಬರು ಮೃತ್ಯು

error: Content is protected !!
Scroll to Top