ಗಂಗೊಳ್ಳಿ : ದೇವಸ್ಥಾನದಲ್ಲಿಯೇ ಆತ್ಮಹತ್ಯೆ ಗೆ ಯತ್ನ..!!!

(ನ್ಯೂಸ್ ಕಡಬ) newskadaba.com ಗಂಗೊಳ್ಳಿ, ಸೆ.17:  ವ್ಯಕ್ತಿಯೋರ್ವ ಇದ್ದಕಿದ್ದಂತೆ ದೇವಲಾಯದ ಒಳಗೆ ಪ್ರವೇಶಿಸಿ, ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಘಟನೆ ಗಂಗೊಳ್ಳಿಯ ಶ್ರೀಮಹಾಕಾಳಿ ದೇವಳದ ಹಿಂಬದಿಯ ದೇವಸ್ಥಾನವೊಂದರಲ್ಲಿ ನಡೆದಿರುವುದು ವರದಿಯಾಗಿದೆ. ಈ ವೇಳೆ ಆತನನ್ನು ರಕ್ಷಿಸಲು ಯತ್ನಿಸಿದ ಇನ್ನಿಬ್ಬರಿಗೂ ತೀವ್ರ ಸುಟ್ಟ ಗಾಯಗಳಾಗಿವೆ.

ಗಂಗೊಳ್ಳಿ ದಾಕುಹಿತ್ಲು ನಿವಾಸಿ ರಾಘವೇಂದ್ರ ಖಾರ್ವಿ(35) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಬೆಂಕಿ ನಂದಿಸಲು ಹೋಗಿ ಗಾಯಗೊಂಡವರನ್ನು ಗಂಗೊಳ್ಳಿಯ ಲಕ್ಷ್ಮಣ ಖಾರ್ವಿ ಹಾಗೂ ಜನಾರ್ದನ ಖಾರ್ವಿ ಎಂದು ಗುರುತಿಸಲಾಗಿದೆ. ಮೂವರನ್ನೂ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.ದೇವಸ್ಥಾನದೊಳಗೆ ಬಂದ ರಾಘವೇಂದ್ರ ಖಾರ್ವಿ ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು, ದೀಪದಿಂದ ಬೆಂಕಿ ಹಚ್ಚಿಕೊಂಡ ಎನ್ನಲಾಗಿದೆ. ಕೂಡಲೇ ಅಲ್ಲೇ ಇದ್ದ ಕೆಲವರು ಬೆಂಕಿ ನಂದಿಸಲು ಮುಂದಾದರು. ಈ ಸಂದರ್ಭ ಲಕ್ಷ್ಮಣ ಮತ್ತು ಜನಾರ್ದನ ಎಂಬವರು ಸುಟ್ಟ ಗಾಯಗೊಂಡರೆನ್ನಲಾಗಿದೆ.ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ಧಾರೆ.

Also Read  ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ಗೆ ನೂತನ ಸಾರಥ್ಯ ➤ ಅಧ್ಯಕ್ಷರಾಗಿ ಎಫ್.ಎಚ್ ಮಿಸ್ಬಾಹಿ, ಪ್ರ.ಕಾರ್ಯದರ್ಶಿಯಾಗಿ ಮುಸ್ತಫಾ ಯು.ಪಿ ಆಯ್ಕೆ

error: Content is protected !!
Scroll to Top