ಬಾಳಿಲ: ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್ ಗೆ ಸಂಪೂರ್ಣ ಭಸ್ಮವಾದ ಬೈಕ್

(ನ್ಯೂಸ್ ಕಡಬ) newskadaba.com ಬಾಳಿಲ, ಸೆ.17: ನಿಲ್ಲಿಸಿದ್ದ ಬೈಕ್‌ ನಲ್ಲಿ ವಯರಿಂಗ್‌ ಶಾರ್ಟ್‌ ಸರ್ಕ್ಯೂಟ್‌ಗೊಂಡು ಬೈಕ್‌ ಸಂಪೂರ್ಣ ಹೊತ್ತಿ ಉರಿದ ಘಟನೆ ಇಂದು ಮಧ್ಯಾಹ್ನ ಬಾಳಿಲದಲ್ಲಿ ನಡೆದಿದೆ.

 

 

ಬಾಳಿಲದ ಭಾರತ ಕಾಂಪ್ಲೆಕ್ಸ್‌ ಸಮೀಪ ಸೆಡ್ನಲ್ಲಿ ರಾಕೇಶ್‌ ಎಂಬವರು ತಮ್ಮ ಬಜಾಜ್‌ ಪಲ್ಸರ್‌ ಬೈಕನ್ನು ನಿಲ್ಲಿಸಿದ್ದರು. ಬೈಕ್‌ ಹೊತ್ತಿ ಉರಿಯುತ್ತಿರುವುದನ್ನು ಕಂಡು ಸ್ಥಳೀಯರು ನೀರು ಹಾಯಿಸಿ ನಂದಿಸಲು ಸಹಕರಿಸಿದರು. ಈ ವೇಳೆ ಬೈಕ್‌ ಸಂಪೂರ್ಣ ಭಸ್ಮ ವಾಗಿತ್ತು.

 

Scroll to Top