ಜೇಬಿನಲ್ಲಿಟ್ಟಿದ್ದ ಮೊಬೈಲ್ ಸ್ಫೋಟ- ಯುವಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಸೊರಬ, ಸೆ. 17. ಬೈಕ್ ಚಲಾಯಿಸುತ್ತಿದ್ದ ವೇಳೆ ಪ್ಯಾಂಟ್ ಕಿಸೆಯಲ್ಲಿದ್ದ ಮೊಬೈಲ್ ಬ್ಲಾಸ್ಟ್ ಆದ ಪರಿಣಾಮ ಯುವಕನೋರ್ವ ಗಂಭೀರ ಗಾಯಗೊಂಡ ಘಟನೆ ಸೊರಬ ತಾಲೂಕಿನ ಕುಪ್ಪಗುಡ್ಡೆ ಗ್ರಾಮದ ಕೆರೆ ಬಳಿ ನಡೆದಿದೆ.

ಗಾಯಗೊಂಡವರನ್ನು ತವನಂದಿ ಗ್ರಾಮದ ಶರತ್(22) ಎಂದು ಗುರುತಿಸಲಾಗಿದೆ. ಈತ ತವನಂದಿ ಗ್ರಾಮದಿಂದ ಕುಪ್ಪಗುಡ್ಡೆಗೆ ಹೋಗುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಇದರಿಂದಾಗಿ ಗಾಬರಿಗೊಂಡ ಯುವಕ ನಿಯಂತ್ರಣ ಕಳೆದುಕೊಂಡು ಕೆರೆಗೆ ಬಿದ್ದಿದ್ದನ್ನು ಕಂಡ ತಕ್ಷಣ ಹಿಂಬದಿಯಲ್ಲಿದ್ದ ಬೈಕ್ ಸವಾರರು ಶರತ್ ನನ್ನು ಸೊರಬ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶರತ್ ನ ಬಲ ತೂಡೆಗೆ ಗಾಯವಾಗಿದ್ದು, ಈ ಕುರಿತು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕಡಬದ ಸ್ಮಶಾನದಲ್ಲಿ ಅರೆ ಬೆಂದ ಸ್ಥಿತಿಯಲ್ಲಿ ಮೃತದೇಹ ಪತ್ತೆ

error: Content is protected !!
Scroll to Top