ಕಾರವಾರ : ಈಜಲು ಹೋದ ಇಬ್ಬರು ಸಮುದ್ರ ಪಾಲು

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.17:  ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಪ್ರವಾಸಿಗರು ನೀರು      ಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಕರಿಯಪ್ಪನ ಕಟ್ಟೆ ಕಡಲತೀರ ಪ್ರದೇಶದಲ್ಲಿ ನಡೆದಿದೆ.

 

ಪ್ರವಾಸಿಗರಾದ ಮೈಸೂರಿನ ಸುಹಾಸ್(17) ಹಾಗೂ ಈತನೊಂದಿಗೆ ಬಂದಿದ್ದ ಮಂಡ್ಯ ಮೂಲದ ಉಲ್ಲಾಸ್ (15) ಸಮುದ್ರದಲ್ಲಿ ಕಾಣಿಯಾದ ಬಾಲಕರಾಗಿದ್ದಾರೆ. ಒಟ್ಟು 8 ಜನರ ತಂಡ ಮೈಸೂರಿನಿಂದ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಕ್ಕೆಂದು ಬಂದಿದ್ದರು.ಸ್ಥಳೀಯರ ಮಾತಿಗೆ ಬೆಲೆ ನೀಡದೆ ಬಾಲಕರು ಸಮುದ್ರಕ್ಕಿಳಿದಿದ್ದು, ಈ ವೇಳೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹಾಗೂ ಸೆಳೆತ ಹೆಚ್ಚಿದ್ದರಿಂದ ಇಬ್ಬರು ಬಾಲಕರು ಸಮುದ್ರದೊಳಗೆ ಕೊಚ್ಚಿಹೋಗಿದ್ದಾರೆ.ಇವರನ್ನು ರಕ್ಷಣೆ ಮಾಡುವ ಪ್ರಯತ್ನ ಮಾಡಿದರೂ ಯುವಕ ಸುಹಾಸ್ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಸಾವು ಕಂಡಿದ್ದಾನೆ. ಇನ್ನೋರ್ವ ಬಾಲಕ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು, ಈತನ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಈ ಘಟನೆ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕರಾವಳಿಯಲ್ಲಿ ಕಡಿಮೆಯಾದ ಮಳೆಯ ಪ್ರಮಾಣ - ನಾಳೆ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ

 

error: Content is protected !!
Scroll to Top