ಡ್ರಗ್ ಪೆಡ್ಲರ್ ಗಳ ಮೇಲೆ ಪೋಲೀಸ್ ದಾಳಿ ➤ ಮೂವರು ಪೋಲೀಸರ ವಶಕ್ಕೆ..!

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.17:  ಕುಂದಾಪುರದ ಕೋಟೇಶ್ವರದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಪೋಲೀಸರು ಬಂಧಿಸಿದ್ದು ಅವರಿಂದ 1.1 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಮೂಡುಗೋಪಾಡಿ ಗ್ರಾಮದ ಮುಷ್ರೀಫ್ ಅಹಮದ್ (24), ವಿಟ್ಟಲ್ವಾಡಿ ಶ್ರೇಯಸ್ ದೇವಾಡಿಗ (23), ಮತ್ತು ಕೋಟೇಶ್ವರ ಮೂಲದ ಪ್ರೀತಮ್ ಅಲಿಯಾಸ್ ಪ್ರೀತು (23) ಎಂದು ಗುರುತಿಸಲಾಗಿದೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸದಾಶಿವ ಗೌರೋಜಿ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದು ಈ ಮೂವರು ಕೋಟೇಶ್ವರದಲ್ಲಿ ದ್ವಿಚಕ್ರ ವಾಹನ ಮಾರಾಟ ಮಳಿಗೆ ಸಮೀಪ ಎರಡು ಮೋಟಾರು ಬೈಕ್‌ಗಳಲ್ಲಿ ಆಗಮಿಸಿದ್ದರು, ಅಲ್ಲಿ ಪೊಲೀಸರು ದಾಳಿ ನಡೆಸಿದ ವೇಳೆ ಆರೋಪಿಗಳು ಗ್ರಾಹಕರ ತಲಾಶ್ ನಲ್ಲಿದ್ದದ್ದಾಗಿ ಮೂಲಗಳು ಹೇಳಿದೆ.

Also Read  ವಿಟ್ಲ: ಅಕ್ರಮ ಗೋ‌ಸಾಗಾಟ ತಡೆದ ಬಜರಂಗದಳ‌ ಕಾರ್ಯಕರ್ತರು

error: Content is protected !!
Scroll to Top