ಗೋಹತ್ಯೆ ಕಡಿವಾಣಕ್ಕೆ ಕೂಗು ➤ ಪೇಜಾವರ ಶ್ರೀಗಳಿಂದ ರಾಜ್ಯ ಸರ್ಕಾರಕ್ಕೆ ಪತ್ರ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.17:  ಗೋ ಹತ್ಯೆಗೆ ಕಡಿವಾಣ ಹಾಕಲು, ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.

ಪರಮ ಪೂಜ್ಯ ಪೇಜಾವರ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಯವರಿಂದ, “ರಾಜ್ಯದಲ್ಲಿ ಗೋ ಹತ್ಯಾ ನಿಷೇಧ ಕಾಯಿದೆಯನ್ನು ತಕ್ಷಣ ಜಾರಿಗೊಳಿಸುವಂತೆ ರಾಜ್ಯದ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.  ಒಂದು ವಾರದ ಹಿಂದೆ ಸಂಘಟನೆಯ ಪ್ರಮುಖರು ಸ್ವಾಮೀಜಿಯವರನ್ನು ಇದೇ ವಿಚಾರದಲ್ಲಿ ಭೇಟಿ ಮಾಡಿ ಮನವಿ ಮಾಡಿಕೊಂಡಿತ್ತು. ರಾಜ್ಯದಲ್ಲಿ ಗೋಹತ್ಯೆ, ಗೋ ಕಳ್ಳತನ ಹಿಂಸಾತ್ಮಕ ಸಾಗಣೆ ನಿರಂತರವಾಘಿ ನಡೆಯುತ್ತಿದೆ. ಇದನ್ನು ತಡೆಗಟ್ಟಬೇಕಾದರೆ ತಠಿಣ ಕಾನೂನು ಬೇಕು ಪ್ರಸಕ್ತ ಅಧಿವೇಶನದಲ್ಲಿಯೇ ಅದನ್ನು ಮಂಡಿಸಿ ಜಾರಿಗೊಳಿಸಬೇಕು ಎಂದು ಹೇಳಿದ್ದಾರೆ.

Also Read  ತಲಕಾವೇರಿಗೆ ಬ್ರಾಹ್ಮಣರ ಪೂಜೆ ಬೇಡ, ನಮಗೆ ಕೊಡಿ ➤ ಅಮ್ಮ ಕೊಡವರಿಂದ ಜಿಲ್ಲಾಧಿಕಾರಿಗೆ ಮನವಿ

error: Content is protected !!
Scroll to Top