ಕರೆನ್ಸಿಗೆಂದು ಬರುತ್ತಿದ್ದ ಯುವತಿಯರಿಗೆ ಅಶ್ಲೀಲ ಸಂದೇಶ ➤ ಯುವತಿಯಿಂದ ಚಪ್ಪಲಿಯೇಟು- ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಮಡಿಕೇರಿ, ಸೆ. 17. ಉಪಾಯದಿಂದ ಯುವತಿಯರ ಮೊಬೈಲ್ ನಂಬರ್ ಪಡೆದು ಬಳಿಕ ಅವರ ಜೊತೆ ಅಶ್ಲೀಲವಾಗಿ ಚಾಟ್ ಮಾಡುತ್ತಿದ್ದ ಯುವಕನೋರ್ವನಿಗೆ ಯುವತಿ ಹಾಗೂ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹಿಗ್ಗಾಮುಗ್ಗ ಥಳಿಸಿದ ಘಟನೆ ಮಂಜಿನ ನಗರಿ ಮಡಿಕೇರಿಯಲ್ಲಿ ನಡೆದಿದೆ.

ಸಾರ್ವಜನಿಕರಿಂದ ಹೊಡೆಸಿಕೊಂಡ ಯುವಕನನ್ನು ಮುದ್ದಸಿರ್ ಎಂದು ಗುರುತಿಸಲಾಗಿದೆ. ಈತ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸದಲ್ಲಿದ್ದು, ಅಲ್ಲಿಗೆ ಕರೆನ್ಸಿಗೆಂದು ಬರುವ ಯುವತಿಯರ ನಂಬರನ್ನು ಸಂಗ್ರಹಿಸಿ, ಬಳಿಕ ಅವರೊಂದಿಗೆ ಪೇಸ್ ಬುಕ್ ನಲ್ಲೂ ನಕಲಿ ಖಾತೆ ತೆರೆದು ಯುವತಿಯರಿಗೆ ಕಾಟ ಕೊಡುತ್ತಿದ್ದ.

ಇವನ ಈ ವರ್ತನೆಯಿಂದ ಬೇಸತ್ತ ಯುವತಿಯೋರ್ವಳು, ಈತನ ನಡವಳಿಕೆಯ ಬಗ್ಗೆ ಕೊಡಗು ರಕ್ಷಣಾ ವೇದಿಕೆ ಕಾರ್ಯಕರ್ತರಿಗೆ ತಿಳಿಸಿ, ಬಳಿಕ ಅವರ ಸೂಚನೆಯಂತೆ ಅವನನ್ನು ಬೇಟಿಯಾಗಲು ಸಾರ್ವಜನಿಕ ಸ್ಥಳಕ್ಕೆ ಕರೆದಿದ್ದಾಳೆ. ಮೊದಲೇ ನಿಗದಿ ಪಡಿಸಿದಂತೆ ರಕ್ಷಣಾ ಕಾರ್ಯಕರ್ತರು ಕಾದು ಕುಳಿತಿದ್ದರು. ಯುವತಿ ಬರುತ್ತಿದ್ದಂತೆಯೇ ಮುದ್ದಸ್ಸಿರ್ ಅವಳ ಬಳಿ ಬಂದಿದ್ದು, ಇದನ್ನು ಗಮನಿಸಿದ ಕಾರ್ಯಕರ್ತರು ಥಳಿಸಿದ್ದಲ್ಲದೇ ಯುವತಿಯು ಕೂಡಾ ಚಪ್ಪಲಿ ತೆಗೆದು ಸರಿಯಾಗಿ ಭಾರಿಸಿದ್ದಾಳೆ. ಈ ಘಟನೆಯನ್ನು ಮೊಬೈಲ್ ನಲ್ಲಿ ಯಾರೋ ತೆಗೆದ ವೀಡಿಯೋ ಸದ್ಯ ವೈರಲ್ ಆಗಿದೆ.

Also Read  RCB ತಂಡಕ್ಕೆ ಕನ್ನಡಿಗ ಸೇರ್ಪಡೆ

error: Content is protected !!
Scroll to Top