ಮಂಗಳೂರು ವಿ. ವಿ : ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.17:  ಮಂಗಳೂರು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಬುಧವಾರ ಆರಂಭಗೊಂಡಿದೆ. ಯುಜಿಯಲ್ಲಿ ಒಟ್ಟು 22,745 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 757 ಮಂದಿ ಗೈರುಹಾಜರಾಗಿದ್ದಾರೆ. ಪಿಜಿ ವಿಭಾಗದಲ್ಲಿ 3,470 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 11 ಮಂದಿ ಗೈರಾಗಿದ್ದಾರೆ.

 

ಗ್ರಾಮೀಣ ಭಾಗದ ಕಾಲೇಜುಗಳ ಸುಮಾರು 500 ವಿದ್ಯಾರ್ಥಿಗಳ ವಿವರ ಲಭಿಸಿಲ್ಲ. ಒಟ್ಟು 205 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ ಎಂದು ವಿವಿ ಪರೀಕ್ಷಾಂಗ ಕುಲಸಚಿವ ಡಾ.ಪಿ.ಎಲ್.ಧರ್ಮ ತಿಳಿಸಿದ್ದಾರೆ. ಪರೀಕ್ಷೆಗೂ ಮುನ್ನ ಎಲ್ಲ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಮಾಸ್ಕ್, ಕೊಠಡಿ ಮೇಲ್ವಿಚಾರಕರಿಗೆ ಗ್ಲೌಸ್ ಕೂಡ ಕಡ್ಡಾಯಗೊಳಿಸಲಾಗಿತ್ತು. ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಇತ್ತು. ಹೊರರಾಜ್ಯಗಳ ಪೈಕಿ ಮಣಿಪುರದಲ್ಲಿ 16, ಜಮ್ಮುವಿನಲ್ಲಿ ಇಬ್ಬರು ಪರೀಕ್ಷೆ ಬರೆದಿದ್ದಾರೆ. ಲಕ್ಷದ್ವೀಪದಲ್ಲಿ ನೋಂದಾಯಿಸಿಕೊಂಡಿರುವ 6 ಮಂದಿಗೆ ಇನ್ನಷ್ಟೇ ಪರೀಕ್ಷೆ ಆರಂಭವಾಗಬೇಕಿದೆ. ಭೂತಾನ್‌ನ ಮೂವರಿಗೆ ಮುಂದಿನ ವಾರ ಪರೀಕ್ಷೆ ನಡೆಯಲಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಬ್ಬರ ಪೈಕಿ ಓರ್ವ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದಾರೆ. ಕೊಣಾಜೆ ಕ್ಯಾಂಪಸ್‌ನ ಹಾಸ್ಟೆಲ್‌ನಲ್ಲಿದ್ದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅವರು ವಾಸವಿರುವ ಪ್ರದೇಶದಲ್ಲೇ ಪರೀಕ್ಷೆಗೆ ಅವಕಾಶ ನೀಡಲಾಗಿತ್ತು.

Also Read  ಡಾ| ಮುರಲೀ ಮೋಹನ್ ಚೂಂತಾರು ► ಸುಬ್ರಹ್ಮಣ್ಯ ಘಟಕಕ್ಕೆ ಭೇಟಿ

error: Content is protected !!
Scroll to Top