ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಸಂಬ್ರಮ ➤ ಸಿಎಂ ಬಿಎಸ್‌ವೈರಿಂದ ಪ್ರಧಾನಿಗೆ ವಿಶ್

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಸೆ.17:  ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಇಂದು 70ನೇ ವರ್ಷದ ಜನ್ಮದಿನದ ಸಂಭ್ರಮ. ಹೀಗಾಗಿ ದೇಶದ ಮೂಲೆ ಮೂಲೆಗಳಿಂದ ಪ್ರಧಾನಿಗಳಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.ಇನ್ನು ಪ್ರಧಾನಿ  ಮೋದಿ ಅವರ ಹುಟ್ಟುಹಬ್ಬದ ಹಿನ್ನೆಲೆ ಅವರೇ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇನ್ನು ರಾಜ್ಯದ ಬಿಜೆಪಿ ನಾಯಕರು ಸೇರಿ ಹಲವು ಗಣ್ಯರು ಭಾರತವನ್ನು ಪ್ರತಿನಿಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಶುಭ ಕಾಮನೆಗಳನ್ನು ಕೋರಿದ್ದಾರೆ.

 

ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಜನ್ಮದಿನದ ಅಭಿಮಾನಪೂರ್ವಕ ಶುಭಕಾಮನೆಗಳು. ಆರೋಗ್ಯಪೂರ್ಣವಾಗಿ ಇನ್ನೂ ಬಹಳ ವರ್ಷಗಳ ಕಾಲ ತಮ್ಮ ರಾಷ್ಟ್ರಸೇವೆ ಹೀಗೆಯೇ ಮುಂದುವರಿಯುವಂತೆ ದೇವರು ಆಶೀರ್ವದಿಸಲಿ ಎಂದು ಹಾರೈಸುತ್ತೇನೆ ಎಂಬುದಾಗಿ ಸಿಎಂ ಬಿಎಸ್‌ವೈ ಶುಭ ಹಾರೈಸಿದ್ದಾರೆ.ಇನ್ನು ಸಂಸದೆ ಶೋಭಾ ಕರಂದ್ಲಾಜೆ ಕೂಡ ಪ್ರಧಾನಿ ಮೋದಿಗೆ ಶುಭ ಕೋರಿದ್ದು ಕರ್ಮ ಯೋಗಿ ಹಾಗೂ ಭಾರತ ಮಾತೆಯ ಪುತ್ರನಿಗೆ ಹುಟ್ಟಹಬ್ಬದ ಶುಭಾಶಯ ಎಂದಿದ್ದಾರೆ.

Also Read  ವಿಶ್ವಕಪ್ ಗೆ ನಟ ಶಾರುಖ್ ಖಾನ್ ರಾಯಭಾರಿ

error: Content is protected !!
Scroll to Top