ಪುತ್ತೂರು: ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಾಗಿ ಎಂ. ಗೋಪಾಲ ನಾಯ್ಕ್ ನೇಮಕ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 16. ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಎರಡು ವರ್ಷಗಳಿಂದ ವೃತ್ತ ನಿರೀಕ್ಷರಾಗಿದ್ದ ತಿಮ್ಮಪ್ಪ ನಾಯ್ಕ್ ರವರನ್ನು ಸರಕಾರ ವರ್ಗಾವಣೆಗೊಳಿಸಿ, ಅವರ ಸ್ಥಾನಕ್ಕೆ ಎಂ. ಗೋಪಾಲ ನಾಯ್ಕ್ ಎಂಬವರನ್ನು ನಿಯೋಜಿಸಿದೆ.

 

ನಕ್ಸಲ್‌ ನಿಗ್ರಹ ಪಡೆಯಲ್ಲಿ ಇನ್ಸ್‌ ಪೆಕ್ಟರ್‌ ಆಗಿದ್ದ ತಿಮ್ಮಪ್ಪ ನಾಯ್ಕ ರವರು ಪುತ್ತೂರು ನಗರ ಠಾಣಾ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಅವರನ್ನು ಮಂಗಳೂರು ಸೈಬರ್ ಕ್ರೈಂ ಠಾಣೆಗೆ ವರ್ಗಾವಣೆಗೊಳಿಸಿ, ಅವರ ಸ್ಥಾನಕ್ಕೆ ಗೋಪಾಲ ನಾಯ್ಕ್‌ ರವರನ್ನು ನಿಯೋಜಿಸಿ ಆದೇಶ ಹೊರಡಿಸಿದೆ.

Also Read  ಮಾರ್ಚ್ 1ರಿಂದ ಜಾನಪದ ಕಡಲೋತ್ಸವ

 

error: Content is protected !!