ಸೆ. 18ರಿಂದ ಬದಲಾಗಲಿದೆ ಎಸ್.ಬಿ.ಐ. ಎಟಿಎಂ ವಿತ್ ಡ್ರಾ ನಿಯಮ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 16. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ಎಟಿಎಂನಲ್ಲಿ ಹಣದ ವಿತ್​ಡ್ರಾ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ರೂಪಿಸಲಾಗಿದೆ.


ಇನ್ನು ಮುಂದೆ 10 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ವಿತ್​ ಡ್ರಾ ಮಾಡಲು ಬಯಸಿದಲ್ಲಿ ನಿಮ್ಮ ಫೋನ್​ಗೆ ಓಟಿಪಿ ಬರುತ್ತದೆ. ನೀವು ಬ್ಯಾಂಕ್​ ಅಕೌಂಟ್ ಗೆ ನೋಂದಣಿ ಮಾಡಲಾಗಿರುವ ಮೊಬೈಲ್​ ಸಂಖ್ಯೆಗೆ ಈ ಓಟಿಪಿ ಬರುತ್ತದೆ. ಅದನ್ನು ಎಟಿಎಂ ಮೆಷಿನ್​ ಮೇಲೆ ನಮೂದು ಮಾಡಿದ ಮೇಲಷ್ಟೇ ಹಣವನ್ನು ಪಡೆಯಲು ಸಾಧ್ಯ.ಆದ್ದರಿಂದ ಇನ್ನು ಮುಂದೆ ಎಸ್​.ಬಿ.ಐನ ಯಾವುದೇ ಎಟಿಎಂಗೆ ಹೋಗುವುದಾದಲ್ಲಿ, 10 ಸಾವಿರ ರೂಪಾಯಿಗಿಂತ ಅಧಿಕ ಹಣವನ್ನು ವಿತ್​ಡ್ರಾ ಮಾಡುವುದಾದರೆ ಮೊಬೈಲ್​ ಫೋನ್​ ಅನ್ನು ಕಡ್ಡಾಯವಾಗಿ ಕೊಂಡೊಯ್ಯಲೇಬೇಕು. ಎಟಿಎಂಗೆ ಕನ್ನ ಹಾಕಿ ಹಣವನ್ನು ವಿತ್​ಡ್ರಾ ಮಾಡುತ್ತಿರುವುದು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ವ್ಯವಸ್ಥೆಯನ್ನು ಬ್ಯಾಂಕ್​ ಮಾಡಿದೆ.

Also Read  ಫೆ. 27ರಂದು ಪಲ್ಸ್ ಪೊಲಿಯೋ ಕಾರ್ಯಕ್ರಮ

ಆದರೆ ಈ ನಿಯಮ ಎಸ್​ಬಿಐನ ಎಟಿಎಂ ಹೊರತುಪಡಿಸಿ ಬೇರೆ ಯಾವುದೇ ಬ್ಯಾಂಕ್​ಗಳ ಎಟಿಎಂನಿಂದ ಹಣವನ್ನು ವಿತ್​ ಡ್ರಾ  ಮಾಡಲು ಅನ್ವಯ ಆಗುವುದಿಲ್ಲ.

error: Content is protected !!
Scroll to Top