(ನ್ಯೂಸ್ ಕಡಬ) newskadaba.com ಎಲಿಮಲೆ, ಸೆ.16: ಸೋಣಂಗೇರಿ ಸುಬ್ರಹ್ಮಣ್ಯ ರಸ್ತೆಯ ಎಲಿಮಲೆಯಲ್ಲಿ ಮೆಸ್ಕಾಂ ವತಿಯಿಂದ ಹೊಸ ಹೆಚ್.ಟಿ. ಲೈನ್ ತಂತಿ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ ಕಂಬ ಅಳವಡಿಸಿ ಹೈ ಟೆನ್ಶನ್ ತಂತಿ ಎಳೆಯಲಾಗಿದೆ. ಆದರೆ ವಿದ್ಯುತ್ ಕಂಬಗಳನ್ನು ಮಾತ್ರ ರಸ್ತೆಬದಿಯಲ್ಲಿ ನೀರು ಹೋಗುವ ಚರಂಡಿಯಲ್ಲಿಯೇ ಹಾಕಲಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ವಿದ್ಯುತ್ ಕಂಬಗಳನ್ನು ರಸ್ತೆ ಬದಿಯಲ್ಲಿ ನೀರು ಹೋಗುವ ಚರಂಡಿಯಲ್ಲಿ ಹಾಕಿ ಎಡವಟ್ಟು ಆಗಿದೆ. ಮಳೆಗಾಲದಲ್ಲಿ ಸಾಕಷ್ಟು ನೀರು ಈ ಚರಂಡಿಯಲ್ಲಿ ಹರಿಯುತ್ತಿದ್ದು ಕಂಬದ ಬುಡದ ಮಣ್ಣು ಕೊಚ್ಚಿ ಹೋಗವುದು ಅಂತು ಪಕ್ಕಾ. ಜತೆಗೆ ಕಂಬದ ಬುಡ ಶಿಥಿಲಗೊಂಡು ವಿದ್ಯುತ್ ಕಂಬ ಧರೆಶಾಹಿಯಾಗುವುದರಲ್ಲಿ ಸಂಶಯವಿಲ್ಲ. ಇದರ ಬಗ್ಗೆ ಅಪಾಯದ ಮುನ್ನೂಚನೆ ಅರಿತು, ಚರಂಡಿಯಲ್ಲಿ ಹಾಕಿರುವ ಕಂಬವನ್ನು ತೆಗೆದು ಸುರಕ್ಷಿತ ಸ್ಥಳದಲ್ಲಿ ಅಳವಡಿಸುವಂತೆ ಜೊತೆಗೆ ಹೆಚ್.ಟಿ.ಲೈನ್ ರೋಡ್ ಕ್ರಾಸ್ ಆಗುವಲ್ಲಿ ಸೇಫ್ ಗಾರ್ಡ್ ಅಳವಡಿಸುವಂತೆಯೂ ಸ್ಥಳೀಯರು ಮೆಸ್ಕಾಂ ಗೆ ಒತ್ತಾಯಿಸಿದ್ದಾರೆ.